Webdunia - Bharat's app for daily news and videos

Install App

Break Up ಬೆನ್ನಲ್ಲೇ ಸಂಬಂಧವನ್ನು ಐಸ್‌ ಕ್ರೀಂಗೆ ಹೋಲಿಸಿದ ನಟ ವಿಜಯ್ ವರ್ಮಾ

Sampriya
ಮಂಗಳವಾರ, 1 ಏಪ್ರಿಲ್ 2025 (18:23 IST)
Photo Courtesy X
ಬೆಂಗಳೂರು: ನಟಿ ತಮನ್ನಾ ಭಾಟಿಯಾ ಅವರೊಂದಿಗಿನ ಬ್ರೇಕಪ್ ಬೆನ್ನಲ್ಲೇ ನಟ ವಿಜಯ್ ವರ್ಮಾ ಅವರು ಯಾವುದೇ ಸಂಬಂಧವನ್ನು ಐಸ್‌ ಕ್ರೀಂನಂತೆ ಆನಂದಿಸಬೇಕೆಂದು ಹೇಳಿದ್ದಾರೆ.

ಇತ್ತೀಚೆಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟ ಸಂಬಂಧಗಳ ಬಗ್ಗೆ ತಮ್ಮ ಮಾತುಗಳನ್ನು ಹಂಚಿಕೊಂಡರು. ಸವಾಲುಗಳ ಮಧ್ಯೆಯೇ ಬದುಕನ್ನು ಹೇಗೆ ಆನಂದಿಸಬೇಕೆಂದು ಹೇಳಿದರು. ಇದೀಗ ನಟಿ ತಮನ್ನಾ ಭಾಟಿಯಾ ಜತೆಗಿನ ಬ್ರೇಕಪ್ ಬೆನ್ನಲ್ಲೇ ವಿಜಯ್ ವರ್ಮಾ ನೀಡಿರುವ ಹೇಳಿಕೆ ಸುದ್ದಿಯಾಗಿದೆ.

ಯಾವುದೇ ಸಂಬಂಧಗಳನ್ನು ಸಿಹಿ, ಉಪ್ಪು, ವಿಭಿನ್ನ ರುಚಿಗಳನ್ನು ಹೊಂದಿರುವ ಐಸ್ ಕ್ರೀಂಗೆ ಹೋಲಿಸಿದರು. ನಿಮ್ಮ ದಾರಿಗೆ ಬಂದದ್ದನ್ನು ಸ್ವೀಕರಿಸಿ ಆನಂದಿಸುವುದು ಉತ್ತಮ, ಪ್ರತಿ ಕ್ಷಣವನ್ನು ಸದುಪಯೋಗಪಡಿಸಿಕೊಳ್ಳುವುದು ಉತ್ತಮ ಎಂದು ವಿಜಯ್ ಸಲಹೆ ನೀಡಿದರು.

ಸಂಬಂಧಗಳನ್ನು ಐಸ್ ಕ್ರೀಂನಂತೆ ಆನಂದಿಸಿದರೆ, ನೀವು ತುಂಬಾ ಸಂತೋಷವಾಗಿರುತ್ತೀರಿ ಎಂದು ನಾನು ಭಾವಿಸುತ್ತೇನೆ. ಅಂದರೆ ಯಾವುದೇ ರುಚಿ ಬಂದರೂ ನೀವು ಅದನ್ನು ಸ್ವೀಕರಿಸಿ ಅದರೊಂದಿಗೆ ಬದುಕಿ ಎಂದರು.

ಕಳೆದ ಎರಡು ವರ್ಷಗಳಿಂದ ತಮನ್ನಾ ಹಾಗೂ ವಿಜಯ್ ವರ್ಮಾ ಡೇಟಿಂಗ್‌ನಲ್ಲಿದ್ದರು. ಆದರೆ ಈಚೆಗೆ ಈ ಜೋಡಿ ಮಧ್ಯೆ ಬ್ರೇಕಪ್ ಆಗಿದೆ ಎಂಬ ಸುದ್ದಿ ಹರಿದಾಡಿದೆ. ಅವರಿಬ್ಬರೂ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಅಧಿಕೃತವಾಗಿ ವಿಘಟನೆಯ ಬಗ್ಗೆ ಮಾತನಾಡಿಲ್ಲವಾದರೂ, ವದಂತಿಗಳು ಹರಡುತ್ತಿವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments