Select Your Language

Notifications

webdunia
webdunia
webdunia
webdunia

ಕೆಜಿಎಫ್ 2 ಜೊತೆ ಪೈಪೋಟಿಗೆ ಬಿದ್ದಿದ್ದ ಲಾಲ್ ಸಿಂಗ್ ಛಡ್ಡಾ ಸಿನಿಮಾ ದಿಡೀರ್ ಮುಂದೂಡಿಕೆ

ಲಾಲ್ ಸಿಂಗ್ ಛಡ್ಡಾ
ಮುಂಬೈ: ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ 2 ಬಿಡುಗಡೆ ದಿನವೇ ಬಿಡುಗಡೆ ದಿನಾಂಕ ಘೋಷಿಸಿದ್ದ ಅಮೀರ್ ಖಾನ್‍ ಅಭಿನಯದ ಬಾಲಿವುಡ್ ನ ಲಾಲ್ ಸಿಂಗ್ ಛಡ್ಡಾ ರಿಲೀಸ್ ದಿನಾಂಕ ದಿಡೀರ್ ಮುಂದೂಡಿಕೆಯಾಗಿದೆ.

ಏಪ್ರಿಲ್ 14 ರಂದೇ ಲಾಲ್ ಚಿಂಗ್ ಛಡ್ಡಾ ಸಿನಿಮಾ ರಿಲೀಸ್ ದಿನಾಂಕ ಘೋಷಣೆ ಮಾಡಲಾಗಿತ್ತು. ರಿಲೀಸ್ ದಿನಾಂಕ ಘೋಷಣೆ ಮಾಡಿದ ಬಳಿಕ ರಾಕಿಂಗ್ ಸ್ಟಾರ್ ಯಶ್ ಜೊತೆ ಅಮೀರ್ ಖಾನ್ ಮಾತುಕತೆಯನ್ನೂ ನಡೆಸಿದ್ದರು. ಇದರ ಬೆನ್ನಲ್ಲೇ ಕೆಜಿಎಫ್ ಎದುರು ಲಾಲ್ ಸಿಂಗ್ ಸೋಲುತ್ತದೆ ಎಂದು ಕೆಲವರು ಟ್ರೋಲ್ ಮಾಡಿದ್ದರು.

ಇದರ ನಡುವೆಯೇ ಈಗ ದಿಡೀರ್ ಆಗಿ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿಕೆಯಾಗಿದೆ. ಆಗಸ್ಟ್ 11 ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಪ್ರಕಟಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಜೊತೆಗೆ ಸ್ಯಾಂಡಲ್ ವುಡ್ ನ ಹಲವು ತಾರೆಯರಿಗೆ ಇಂದೇ ಜನ್ಮದಿನ