Select Your Language

Notifications

webdunia
webdunia
webdunia
webdunia

ನಟ ಅಮೀರ್ ಖಾನ್ ಮಗಳ ಹೊಕ್ಕುಳ ಪ್ರದರ್ಶನ

ಅಮೀರ್ ಖಾನ್ ಪುತ್ರಿ
Bangalore , ಭಾನುವಾರ, 25 ಡಿಸೆಂಬರ್ 2016 (07:35 IST)
ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಮೇಲೆ ಅಭಿಮಾನಿಗಳು ಅಪಾರ ಗೌರವ, ಭರವಸೆಗಳನ್ನು ಇಟ್ಟಿದ್ದಾರೆ. ಇದೀಗ ಬಿಡುಗಡೆಯಾಗಿರುವ ಅವರ ’ದಂಗಲ್’ ಸಿನಿಮಾ ಬಾಕ್ಸ್ ಆಫೀಸಲ್ಲಿ ದಂಗೆದ್ದು ಕಲೆಕ್ಷನ್ ಮಾಡುತ್ತಿದೆ. ಇದೀಗ ಅವರ ಮಗಳ ಫೋಟೋವೊಂದು ಅಂತರ್ಜಾಲದಲ್ಲಿ ಭಾರಿ ಸದ್ದು ಮಾಡುತ್ತಿದೆ.
 
ಅಮೀರ್ ಖಾನ್‌ರ ಮೊದಲ ಪತ್ನಿಯ ಮಗಳು ಯಾವ ಹೀರೋಯಿನ್‍ಗೂ ಕಡಿಮೆ ಇಲ್ಲದಷ್ಟು ಸುಂದರವಾಗಿದ್ದಾರೆ. ಆದರೆ ಯಾಕೋ ಏನೋ ಅವರು ಬಣ್ಣದ ಜಗತ್ತಿನಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಲಿಲ್ಲ. ಆಕೆಯ ಹೆಸರು ಇರಾ ಖಾನ್. ಇತ್ತೀಚೆಗೆ ಅಮೀರ್ ಮತ್ತು ಇರಾ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 
 
ಆ ಸಮಾರಂಭದಲ್ಲಿ ಇರಾ ಹೊಕ್ಕುಳು ಪ್ರದರ್ಶನದ ಮೇಲೆ ಛಾಯಾಗ್ರಾಹಕರ ಕಣ್ಣು ಬಿದ್ದಿದೆ. ಮಿರರ್ ವರ್ಕ್ ಇರೋಂತ ಲಂಗಾ ದಾವಣಿ ತೊಟ್ಟಿದ್ದ ಫೋಟೋಗಳು ಈಗ ಇಂಟರ್‌ನೆಟ್‍ನಲ್ಲಿ ಹರಿದಾಡುತ್ತಿವೆ. ಇರಾ ಬಣ್ಣದ ಜಗತ್ತಿಗೆ ಅಡಿಯಿಡುವ ಸೂಚನೆ ಇದೆ ಇರಬಹುದೇ ಎಂಬ ಲೆಕ್ಕಾಚಾರ ನಡೆದಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ ಜನ್ಮದಿನದಂದು ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ