Select Your Language

Notifications

webdunia
webdunia
webdunia
webdunia

ರಾಜ್ ಜನ್ಮದಿನದಂದು ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ

ರಾಜ್ಯ ಚಲನಚಿತ್ರ ಪ್ರಶಸ್ತಿ
Bangalore , ಭಾನುವಾರ, 25 ಡಿಸೆಂಬರ್ 2016 (07:24 IST)
ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ವರನಟ ಡಾ. ರಾಜ್ ಕುಮಾರ್ ಜನ್ಮದಿನವಾದ ಏಪ್ರಿಲ್ 24ರಂದು ನಡೆಸಲು ಸರ್ಕಾರ ಆದೇಶಿಸಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಎನ್ ಆರ್ ವಿಶುಕುಮಾರ್ ಅವರು ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.
 
2014-15ನೇ ಕ್ಯಾಲೆಂಡಲ್ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷ ಭಾಷಣದಲ್ಲಿ ಮುಖ್ಯಮಂತ್ರಿಯವರು, ಇನ್ನು ಮುಂದೆ ಪ್ರತಿವರ್ಷ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ವರನಟ ಡಾ.ರಾಜ್‍ಕುಮಾರ್ ಅವರ ಜನ್ಮದಿನವಾದ ಏಪ್ರಿಲ್ 24ರಂದು ಏರ್ಪಡಿಸಲಾಗುವುದೆಂದು ಘೋಸಿಸಿದ್ದಾರೆ.
 
ಡಾ.ರಾಜ್ ಕುಮಾರ್ ಅವರು ಕನ್ನಡ ಚಲನಚಿತ್ರೋದ್ಯಮಕ್ಕೆ ನೀಡಿರುವ ಕೊಡುಗೆ ಅವಿಸ್ಮರಣೀಯವಾದ್ದರಿಂದ, ಅವರ ಜನ್ಮದಿನಾಚರಣೆ ಅಚರಿಸುವ ಏಪ್ರಿಲ್ 24ರಂದು ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸಲು ಉದ್ದೇಶಿಸಿರುವುದಾಗಿ ಈ ಮೇರೆಗೆ ಆದೇಶಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಫೇಸ್‌ಬುಕ್‍ನಲ್ಲಿ ’ದಂಗಲ್’ ಫುಲ್ ಮೂವಿ ಲೀಕ್!