Select Your Language

Notifications

webdunia
webdunia
webdunia
webdunia

ಮಕ್ಕಳು, ಕುಟುಂಬದವರ ಸಮ್ಮುಖದಲ್ಲಿ ಮೂರನೇ ಮದುವೆಯಾದ ಅಮೀರ್ ಖಾನ್

Aamir Khan wedding
Photo Credit: X
ಮುಂಬೈ: ಮಕ್ಕಳು, ಕುಟುಂಬದವರು, ಆಪ್ತರ ಸಮ್ಮುಖದಲ್ಲಿ ಬಾಲಿವುಡ್ ನಟ ಅಮೀರ್ ಖಾನ್ ಮೂರನೇ ಬಾರಿಗೆ ಮದುವೆಯಾಗಿದ್ದಾರೆ. ಗೌರಿ ಸ್ಪ್ರ್ಯಾಟ್ ಜೊತೆ ಅಮೀರ್ ಇಂದು ಸರಳವಾಗಿ ಮದುವೆಯಾಗಿದ್ದಾರೆ.

ಅಮೀರ್ ಗೆ ಇದು ಮೂರನೇ ಮದುವೆಯಾಗಿದೆ. ಈ ಮೊದಲು ರೀನಾ ಮತ್ತು ಕಿರಣ್ ರಾವ್ ಜೊತೆ ಅಮೀರ್ ಮದುವೆಯಾಗಿ ವಿಚ್ಛೇದನ ಪಡೆದಿದ್ದರು. ಇದೀಗ ಮೂರನೇ ಪತ್ನಿ ಗೌರಿ ಬೆಂಗಳೂರಿನವರು ಎಂಬುದು ವಿಶೇಷವಾಗಿದೆ.

ಮುಂಬೈನ ಅಮೀರ್ ಖಾನ್ ನಿವಾಸದಲ್ಲಿ ಸರಳವಾಗಿ ಮದುವೆ ಕಾರ್ಯಕ್ರಮ ನೆರವೇರಿದೆ. ಮದುವೆಗೆ ಅಮೀರ್ ಪುತ್ರ ಜುನೈದ್, ಆಜಾದ್ ರಾವ್ ಖಾನ್, ಪುತ್ರಿ ಇರಾ ಖಾನ್ ಮತ್ತು ಅಳಿಯ ಸೇರಿದಂತೆ ಕುಟುಂಬಸ್ಥರು ಬಂದಿದ್ದಾರೆ. ಇನ್ನು, ಉದ್ಯಮಿ ಮುಕೇಶ್ ಅಂಬಾನಿ, ಕ್ರಿಕೆಟಿಗ ಇರ್ಫಾನ್ ಪಠಾಣ್, ರಾಜ್ ಠಾಕ್ರೆ ಸೇರಿದಂತೆ ಆಪ್ತ ಸೆಲೆಬ್ರಿಟಿಗಳು, ರಾಜಕಾರಣಿಗಳು ಬಂದಿದ್ದಾರೆ. 61 ವರ್ಷದ ಅಮೀರ್ ಮತ್ತು 47 ವರ್ಷದ ಗೌರಿ ವಿವಾಹದ ನೋಂದಣಿ ಪತ್ರಕ್ಕೆ ಸಹಿ ಹಾಕುತ್ತಿರುವ ಫೋಟೋಗಳು ವೈರಲ್ ಆಗಿವೆ.


Share this Story:

Follow Webdunia kannada

ಮುಂದಿನ ಸುದ್ದಿ

ಪಡೆದುಕೊಂಡ ಮೇಲೆ.. ಊಹಾಪೋಹಗಳ ನಡುವೆ ಆ ನಟನಿಗೆ ಟಾಂಗ್ ಕೊಟ್ರಾ ವಿಜಯಲಕ್ಷ್ಮಿ ದರ್ಶನ್