Select Your Language

Notifications

webdunia
webdunia
webdunia
webdunia

ಕೆಜಿಎಫ್ 2 ಜೊತೆಗೆ ಪೈಪೋಟಿಗಿಳಿದ ಲಾಲ್ ಸಿಂಗ್ ಚಡ್ಡಾ

ಕೆಜಿಎಫ್ 2 ಜೊತೆಗೆ ಪೈಪೋಟಿಗಿಳಿದ ಲಾಲ್ ಸಿಂಗ್ ಚಡ್ಡಾ
ಮುಂಬೈ , ಸೋಮವಾರ, 22 ನವೆಂಬರ್ 2021 (09:26 IST)
ಮುಂಬೈ: ಕೆಜಿಎಫ್ 2 ಸಿನಿಮಾ ರಿಲೀಸ್ ದಿನವೇ ಅಮೀರ್ ಖಾನ್ ಅಭಿನಯದ ಲಾಲ್‍ ಸಿಂಗ್ ಚಡ್ಡಾ ಸಿನಿಮಾ ರಿಲೀಸ್ ದಿನಾಂಕ ಘೋಷಣೆಯಾಗಿದೆ. ಹೀಗಾಗಿ ಅಮೀರ್ ಖಾನ್ ಮತ್ತು ಯಶ್ ಅಭಿಮಾನಿಗಳ ನಡುವೆ ವಾರ್ ಶುರುವಾಗಿದೆ.

ಕೆಜಿಎಫ್ 2 ಸಿನಿಮಾವನ್ನು 2022 ರ ಏಪ್ರಿಲ್ 14 ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಮೊದಲೇ ಘೋಷಿಸಿತ್ತು. ಇದೀಗ ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಕೂಡಾ ಇದೇ ದಿನ ಬಿಡುಗಡೆ ಘೋಷಿಸಿದೆ.

ಈ ಹಿಂದೆ ಕೆಜಿಎಫ್ 1 ಸಿನಿಮಾ ಬಿಡುಗಡೆಯಾದಾಗ ಬಾಲಿವುಡ್ ನಲ್ಲಿ ಶಾರುಖ್ ಖಾನ್ ಅಭಿನಯದ ಜೀರೋ ಸಿನಿಮಾ ಬಿಡುಗಡೆಯಾಗಿತ್ತು. ಇದೀಗ ಕೆಜಿಎಫ್ 2 ಸಿನಿಮಾ ಎದುರು ಲಾಲ್ ಸಿಂಗ್ ಚಡ್ಡಾ ಎದ್ದು ನಿಲ್ಲುತ್ತದೋ, ನೆಲಕಚ್ಚುತ್ತದೋ ಕಾದು ನೋಡಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಜೊತೆ ನಾವಿದ್ದೇವೆ: ಪಿಆರ್ ಕೆ ಪ್ರೊಡಕ್ಷನ್ ಗೆ ಪುನೀತ್ ಫ್ಯಾನ್ಸ್ ಬೆಂಬಲ