ರಜನಿಕಾಂತ್‌ ಬಹುನಿರೀಕ್ಷಿತ ‘ಕಾಲಾ’ ಚಿತ್ರದ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್

ರಾಮಕೃಷ್ಣ ಪುರಾಣಿಕ
ಮಂಗಳವಾರ, 13 ಫೆಬ್ರವರಿ 2018 (19:34 IST)
ಕೆಲವು ದಿನಗಳ ಹಿಂದೆಯಷ್ಟೇ ರಜನಿಕಾಂತ್ ಅಭಿನಯದ ‘ಕಾಲಾ’ ಚಿತ್ರದ ಬಿಡುಗಡೆ ದಿನಾಂಕವು ಅಧೀಕೃತವಾಗಿ ಘೋಷಣೆಯಾಗಿತ್ತು ಮತ್ತು ಚಿತ್ರದ ಬಿಡುಗಡೆಯ ಸುದ್ದಿ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಚಿತ್ರದ ತುಣುಕೊಂದು ಇಂಟರ್ನೆಟ್‌ನಲ್ಲಿ ಸೋರಿಕೆಯಾಗಿದೆ.
ವರದಿಗಳ ಪ್ರಕಾರ, ರಜನಿಕಾಂತ್‌ರವರ ಸಾಹಸ ಸನ್ನಿವೇಶ ಹೊಂದಿರುವ ದೃಶ್ಯವೊಂದು ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸಿದೆ. 13 ಸೆಕೆಂಡುಗಳ ಈ ವೀಡಿಯೊವನ್ನು ಸಾಹಸ ಸನ್ನಿವೇಶದ ದೃಶ್ಯವನ್ನು ಚಿತ್ರೀಕರಣ ಮಾಡುತ್ತಿರುವಾಗ ಸೆರೆಹಿಡಿದಿರುವಂತೆ ತೋರುತ್ತದೆ ಮತ್ತು ಈ ದೃಶ್ಯ ಅಂತಿಮವಾಗಿ ಚಿತ್ರದಲ್ಲಿ ಇರುವುದರ ಕುರಿತು ಯಾವುದೇ ಸ್ಪಷ್ಟ ಮಾಹಿತಿಯಿಲ್ಲ. ಚಿತ್ರ ನಿರ್ಮಾಣ ತಂಡವು ಇನ್ನೂ ಸೋರಿಕೆ ಕುರಿತು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
 
ಗ್ಯಾಂಗ್‌ಸ್ಟರ್‌ಗಳ ಕುರಿತಾಗಿರುವ ಈ ಚಿತ್ರವು, ಮುಂಬೈನಲ್ಲಿ ತಮಿಳಿಗರ ಬೆಂಬಲಕ್ಕಾಗಿ ನಿಲ್ಲುವ ತಮಿಳಿಗರ ಡಾನ್‌ನ ಕುರತಾದ ಕಥೆಯನ್ನು ಹೊಂದಿದೆ ‘ಕಾಲಾ’ ಚಲನಚಿತ್ರ. ಈ ಮೊದಲು, ಚಿತ್ರವು ಹಾಜಿ ಮಸ್ತಾನ್ ಜೀವನವನ್ನು ಆಧರಿಸಿದೆ ಎಂದು ವರದಿಗಳು ತಿಳಿಸಿದ್ದವು, ನಂತರದಲ್ಲಿ ಪಾ ರಂಜೀತ್ ಆಧಾರವಿಲ್ಲದ ವದಂತಿಯನ್ನು ತಳ್ಳಿಹಾಕಿದ್ದರು. 'ಕಬಾಲಿ' ಚಲನಚಿತ್ರದ ಯಶಸ್ಸಿನ ನಂತರ ರಂಜೀತ್ ಜೊತೆಗೆ ರಜನಿಕಾಂತ್ ಅವರ ಎರಡನೇ ಚಿತ್ರ ಇದಾಗಿದ್ದು, ಅಳಿಯ ಧನುಷ್ ಅವರ ವಂಡರ್‌ಬಾರ್ ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಣವಾಗಿದೆ.
 
‘ಕಾಲಾ’ ಚಲನಚಿತ್ರದಲ್ಲಿ ಹುಮಾ ಖುರೇಶಿ, ನಾನಾ ಪಾಟೇಕರ್, ಸಮುದ್ರಕಣಿ, ಅಂಜಲಿ ಪಾಟೀಲ್, ಸಂಪತ್ ರಾಜ್ ಮತ್ತು ಈಶ್ವರಿ ರಾವ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಏಪ್ರಿಲ್ 27 ರಂದು ಅದ್ಧೂರಿ ಬಿಡುಗಡೆಗೆ ಸಿದ್ಧವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಎರಡನೇ ಬಾರಿ ಜೈಲು ಸೇರಿದ ದರ್ಶನ್ ಎಷ್ಟು ತೂಕ ಇಳಿಸಿಕೊಂಡಿದ್ದಾರೆ: ಶಾಕಿಂಗ್

ಡಿಡಿಎಲ್‌ಜಿಗೆ 30 ವರ್ಷ: ಲಂಡನ್‌ನಲ್ಲಿ ಗಮನ ಸೆಳೆದ ಶಾರುಖ್‌, ಕಾಜೋಲ್ ಜೋಡಿ

ಕಾಂತಾರ 2ರ ನಟ ನಟಿಗೆ ಐಎಂಡಿಬಿ ಟಾಪ್ ಪಟ್ಟಿಯಲ್ಲಿ ಸ್ಥಾನ, ಯಾರಿಗೆ ಗೊತ್ತಾ

ನಂದಮೂರಿ ಬಾಲಕೃಷ್ಣ ಅಖಂಡ 2ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಭಾರೀ ನಿರಾಸೆ

ಲಡಾಖಿ ಮದುವೆಯಲ್ಲಿ ಕಂಗನಾ ಸಾಂಪ್ರದಾಯಿ ಲುಕ್‌ಗೆ ಫಿದಾ

ಮುಂದಿನ ಸುದ್ದಿ
Show comments