ಪ್ರಿಯಾ ಪ್ರಕಾಶ್ ನಟಿ ಮಾತ್ರವಲ್ಲ, ಒಳ್ಳೆಯ ಸಿಂಗರ್ ಎನ್ನುವುದು ನಿಮಗೆ ಗೊತ್ತಾ?

ನಾಗಶ್ರೀ ಭಟ್
ಮಂಗಳವಾರ, 13 ಫೆಬ್ರವರಿ 2018 (16:37 IST)
ಕೇವಲ 24 ಗಂಟೆಗಳಲ್ಲಿ ತಮ್ಮ ವೀಡಿಯೊವೊಂದರಿಂದ ಇಂಟರ್‌ನೆಟ್‌ನಲ್ಲಿ ಸೆನ್ಸೇಶನ್ ಉಂಟುಮಾಡಿರುವ ಮಲಯಾಳಂ ಮೂಲದ ಈ ನಟಿ ಕೇವಲ ಅಭಿನಯದಲ್ಲಿ ಮಾತ್ರವಲ್ಲ ಹಾಡುವುದರಲ್ಲೂ ಪ್ರವೀಣೆ ಎನ್ನುವುದು ತಿಳಿದುಬಂದಿದೆ.
ಮೊನ್ನೆಯಿಂದಲೂ ಯೂಟ್ಯೂಬ್, ಫೇಸ್‌ಬುಕ್, ಇನ್ಸ್ಟಾಗ್ರಾಮ್‌ನಲ್ಲಿ ಎಲ್ಲಿ ನೋಡಿದರೂ ಪ್ರಿಯಾ ಪ್ರಕಾಶ ಅಭಿನಯಿಸಿರುವ ಚಿತ್ರವೊಂದರ ಹಾಡು ಟ್ರೆಂಡಿಂಗ್‌ನಲ್ಲಿದೆ. ಈ ಹಾಡಿಗೆ ಪ್ರಿಯಾ ಕೊಟ್ಟ ಎಕ್ಸ್‌ಪ್ರೆಶನ್‌ಗಳು ಹುಡುಗರ ಹೃದಯವನ್ನು ಕದ್ದಂತಿದೆ. ಈಗಾಗಲೇ ಈ ಹಾಡನ್ನು 4 ಮಿಲಿಯನ್‌ಗೂ ಅಧಿಕ ಜನರು ವೀಕ್ಷಿಸಿದ್ದು ಟ್ರೆಂಡಿಂಗ್‌ನಲ್ಲಿ ನಂ. 1 ಆಗಿದೆ.
 
ಆದರೆ ಇತ್ತೀಚೆಗೆ ಪ್ರಿಯಾ ಪ್ರಕಾಶ್ ಇನ್ಸ್ಟಾಗ್ರಾಮ್ ಖಾತೆಯನ್ನು ತೆರೆದು ನೋಡಿದಾಗ ತಿಳಿದ ವಿಷಯವೆಂದರೆ ಅವರು ಉತ್ತಮ ನಟಿಯೊಂದೇ ಅಲ್ಲ ಚೆನ್ನಾಗಿ ಹಾಡುತ್ತಾರೆ ಎನ್ನುವುದು. ಇನ್ಸ್ಟಾಗ್ರಾಮ್‌ನಲ್ಲಿರುವ ವೀಡಿಯೊವೊಂದರಲ್ಲಿ ಇವರು ಹೊಡೊಂದನ್ನು ಚೆನ್ನಾಗಿ ಹಾಡಿದ್ದಾರೆ. ಉತ್ತಮ ಕಂಠವನ್ನು ಹೊಂದಿರುವ ಇವರು ಸಂಗೀತದಲ್ಲಿ ತರಬೇತಿ ಪಡೆದಿರುತ್ತಾರೆ ಎನ್ನುವುದು ಹಲವರ ಅಭಿಪ್ರಾಯ.
 
ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿರುವ 'ಒರು ಅದಾರ್ ಲವ್' ಚಿತ್ರದ 'ಮಾಣಿಕ್ಯ ಮಲರಯಾ ಪೂವಿ' ಹಾಡಿನ ವೀಡಿಯೊ ಬಿಡುಗಡೆಯಾಗಿದ್ದು ಅದರಲ್ಲಿ ನಟಿಸಿದ ಪ್ರಿಯಾ ಪ್ರಕಾಶ್ ಒಂದೇ ದಿನದಲ್ಲಿ ಸೆಲೆಬ್ರಿಟಿಯಾಗಿಬಿಟ್ಟಿದ್ದಾರೆ. ವಿನೀತ್ ಶ್ರೀನಿವಾಸನ್ ಅವರು ಹಾಡಿದ, ಶಾನ್ ರೆಹಮಾನ್ ಸಂಯೋಜಿಸಿದ ಈ ಹಾಡು ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. ಆದರೆ ಈ ಹಾಡಿನಲ್ಲಿ ಜನರನ್ನು ಹೆಚ್ಚಾಗಿ ಆಕರ್ಷಿಸಿ ಪ್ರಶಂಸೆಗೆ ಪಾತ್ರವಾಗಿದ್ದು ಪ್ರಿಯಾ ಪ್ರಕಾಶ್ ಅಭಿನಯ. ತಮ್ಮ ಕಣ್ಣಿನ ಸನ್ನೆಯಿಂದ ಇವರು ಪಡ್ಡೆ ಹುಡುಗರ ಹೃದಯಕ್ಕೆ ಕನ್ನ ಹಾಕಿರುವುದು ಸುಳ್ಳಲ್ಲ.
 
ಈಗಷ್ಟೇ ತಮ್ಮ ಮೊದಲ ಚಿತ್ರದಲ್ಲಿ ಅಭಿನಯಿಸುತ್ತಿರುವ ಇವರು ಬಿಕಾಂ ವಿದ್ಯಾರ್ಥಿನಿಯಾಗಿದ್ದಾರೆ. ಚೆನ್ನಾಗಿ ಹಾಡು ಹೇಳುವ, ಡ್ಯಾನ್ಸ್ ಮಾಡುವ ಇವರು ರೂಪದರ್ಶಿಯೂ ಹೌದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮತ್ತೇ ಪ್ರೀತಿಯಲ್ಲಿ ಬಿದ್ರಾ ಸಾನಿಯಾ ಮಿರ್ಜಾ, ಕುತೂಹಲ ಮೂಡಿಸಿದ ಈ ಫೋಟೋ

ಮಧ್ಯದ ಬೆರಳು ತೋರಿಸಿ ದುರ್ವತನೆ ತೋರಿದ ಆರ್ಯನ್ ಖಾನ್‌ಗೆ ಬಿಗ್‌ ಶಾಕ್‌

ಎರಡನೇ ಬಾರಿ ಜೈಲು ಸೇರಿದ ದರ್ಶನ್ ಎಷ್ಟು ತೂಕ ಇಳಿಸಿಕೊಂಡಿದ್ದಾರೆ: ಶಾಕಿಂಗ್

ಡಿಡಿಎಲ್‌ಜಿಗೆ 30 ವರ್ಷ: ಲಂಡನ್‌ನಲ್ಲಿ ಗಮನ ಸೆಳೆದ ಶಾರುಖ್‌, ಕಾಜೋಲ್ ಜೋಡಿ

ಕಾಂತಾರ 2ರ ನಟ ನಟಿಗೆ ಐಎಂಡಿಬಿ ಟಾಪ್ ಪಟ್ಟಿಯಲ್ಲಿ ಸ್ಥಾನ, ಯಾರಿಗೆ ಗೊತ್ತಾ

ಮುಂದಿನ ಸುದ್ದಿ
Show comments