Article Bollywood Gossips %e0%b2%b8%e0%b3%8d%e0%b2%b2%e0%b2%ae%e0%b3%8d %e0%b2%b8%e0%b3%81%e0%b2%82%e0%b2%a6%e0%b2%b0%e0%b2%bf%e0%b2%af %e0%b2%aa%e0%b3%8d%e0%b2%b0%e0%b2%bf%e0%b2%af%e0%b2%95%e0%b2%b0 %e0%b2%88%e0%b2%97 %e0%b2%a6%e0%b3%87%e0%b2%b5%e0%b2%a6%e0%b2%be%e0%b2%b8 109021600079_1.htm

Daily Horoscope

Select Your Language

Notifications

webdunia
webdunia
webdunia
webdunia

'ಸ್ಲಮ್' ಸುಂದರಿಯ ಪ್ರಿಯಕರ ಈಗ ದೇವದಾಸ

ಫ್ರೀದಾ ಪಿಂಟೋ
IFM
ಸ್ಲಮ್ ಸುಂದರಿ ಫ್ರೀದಾ ಪಿಂಟೋ ತನ್ನ ಬಾಯ್ ಫ್ರೆಂಡ್‌ಗೆ ಕಿಕ್ ಕೊಟ್ಟದ್ದು ಹಳೆ ಸುದ್ದಿ. ತನ್ನ 'ಸ್ಲಮ್ ಡಾಗ್ ಮಿಲಿಯನೇರ್' ಚಿತ್ರ ಜಗತ್ತಿನಾದ್ಯಂತ ಹೆಸರು ಮಾಡುತ್ತಿರುವಾಗ ಮದುವೆ ಮಾಡಿಕೊಂಡು ನಿಯಂತ್ರಿಸಲ್ಪಡುವ ಇಚ್ಛೆಯನ್ನು ಸ್ಪಷ್ಟವಾಗಿ ಧಿಕ್ಕರಿಸಿದವಳು ಪಿಂಟೋ.

ಮೊನ್ನೆ ಮೊನ್ನೆಯವರೆಗೆ ಇದು ಕೇವಲ ವದಂತಿಯಾಗಿ ಸುತ್ತುತ್ತಿತ್ತು. ಸ್ವತಃ ಆಕೆಯನ್ನೇ ಕೇಳಿದಾಗಲೂ "ಅದು ನನ್ನ ವೈಯಕ್ತಿಕ ವಿಚಾರ. ಅಂತಹ ವಿಷಯಗಳನ್ನೆಲ್ಲ ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಿದ್ಧಳಿಲ್ಲ. ಅಷ್ಟಕ್ಕೂ ನಿಶ್ಚಿತಾರ್ಥ ನಡೆದಿರುವುದಕ್ಕೆ ನಿಮ್ಮಲ್ಲಿ ಏನು ಸಾಕ್ಷ್ಯಗಳಿವೆ?" ಎಂದು ಎಗರಾಡಿದ್ದಳು. ನಮ್ಮಲ್ಲೂ ಸಾಕ್ಷ್ಯಗಳಿಲ್ಲ- ಆದರೆ ಸುದ್ದಿಗಳಿವೆ. ಆಕೆಯ ಬಾಯ್ ಫ್ರೆಂಡ್ ಬಗ್ಗೆ ಮತ್ತು ಅವರ ನಡುವಿನ ಸಂಬಂಧದ ಬಗ್ಗೆ ಒಂದಿಷ್ಟು ವಿವರಗಳಿವೆ.. ಓದಿಕೊಳ್ಳಿ..

ಮ‌ೂಲಗಳ ಪ್ರಕಾರ 18ರ ಪಿಂಟೋಗಿಂತ ನಾಲ್ಕು ವರ್ಷ ಹಿರಿಯವನಾಗಿರುವ ಆತನ ಹೆಸರು ರೋಹನ್. ಬೆಂಗಳೂರು ಮ‌ೂಲದ ಉದ್ಯಮಿ. ಇತ್ತೀಚೆಗಷ್ಟೇ ಇಬ್ಬರೂ ಮುಂಬೈಯ ಸೈಂಟ್ ಕ್ಸೇವಿಯರ್ಸ್ ಯುನಿವರ್ಸಿಟಿಯಲ್ಲಿ ಭೇಟಿಯಾಗಿದ್ದಾಗ ಮನವೊಲಿಸುವ ಪ್ರಯತ್ನವನ್ನು ಆತ ಮಾಡಿದ್ದನಂತೆ. ಅದು ವಿಫಲ ಯತ್ನ. ಆದರೂ ಆತ 'ಮರಳಿ ಯತ್ನವ ಮಾಡು'ರ ಎಂಬ ಸೂತ್ರದಲ್ಲಿ ನಂಬಿಕೆಯಿಟ್ಟವ. ಆದರೆ ಅವರಿಬ್ಬರ ಸಂಬಂಧ ಸೂತ್ರ ತಪ್ಪಿದ ಗಾಳಿಪಟವಾಗಿದೆ ಎನ್ನುವುದು ತುಂಬಾ ಹತ್ತಿರದವರ ಮಾತು.

"ಅವರು ಒಬ್ಬರಿಗೊಬ್ಬರು ಸಹಕಾರಿಯಾಗಿದ್ದರು. ರೋಹನ್ ತನ್ನ ಪ್ರಿಯತಮೆ ಫ್ರೀದಾಳಿಗಾಗಿ ಏನು ಮಾಡಲೂ ಸಿದ್ಧನಿದ್ದ. ಅವರು ಪ್ರೇಮಿಗಳು ಎನ್ನುವುದಕ್ಕಿಂತಲೂ ಹೆಚ್ಚು ಆಪ್ತ ಸ್ನೇಹಿತರಾಗಿದ್ದರು. ಆಕೆಯ ವೆಬ್‌ಸೈಟ್ ರೂಪಿಸಲು ಕೂಡ ಆತನೇ ಸಹಾಯ ಮಾಡಿದ್ದ. ನಂತರ ಪ್ರಚಾರ, ಮಾರ್ಕೆಟಿಂಗ್ ವಿಚಾರಗಳಲ್ಲಿ ಕೂಡ ಆತ ಶ್ರಮವಹಿಸಿ ಪಿಂಟೋಳನ್ನು ಮೇಲೆ ತರಲು ಯತ್ನಿಸಿದ್ದ. ಅದು ಎಲ್ಲಿಯವರೆಗೆ ಎಂದರೆ ಫ್ಯಾಷನ್ ಚಿತ್ರೀಕರಣಗಳಲ್ಲಿ ಆಕೆಯ ಬಟ್ಟೆಗಳನ್ನು ತಾನೇ ಆಯ್ಕೆ ಮಾಡುವಷ್ಟು" ಎಂದು ಇವರಿಬ್ಬರ ಆಪ್ತರೊಬ್ಬರು ಗತಕಾಲದಲ್ಲಿ ಕಂಡು ಕೇಳಿದ್ದನ್ನು ಕಥೆಯಾಗಿ ಬಿಡಿಸಿಡುತ್ತಾರೆ.

ಸಿನಿಮಾ ಹಿಟ್ ಆಗುತ್ತಿದ್ದಂತೆ ಮೇಲೆ ಹತ್ತಿದ ಏಣಿ ರೋಹನ್‌‌ನನ್ನು ಕೆಳಕ್ಕೆ ತಳ್ಳಿದ ಫ್ರೀದಾ ಪಿಂಟೋಗೆ ಈಗ ಆತನ ನೆನಪೇ ಇಲ್ಲವಂತೆ. ಒಟ್ಟಾರೆ ಅವರಿಬ್ಬರು ಈಗ ಜತೆಯಾಗಿಲ್ಲ.. ಬೇರ್ಪಟ್ಟಿದ್ದಾರೆ ಎಂಬುದು ಮಾತ್ರ ಶುದ್ಧ ಸತ್ಯ. ಒಟ್ಟಾರೆ ಆತ ದೇವದಾಸನಾಗುತ್ತಿದ್ದಾನೆ ಎನ್ನುವ ಸುದ್ದಿ ಸುಳ್ಳಲ್ಲ..!
webdunia
IFM

ಆತನ ಹೃದಯದಲ್ಲಿ ಆಕೆಯನ್ನು ಭವ್ಯವಾಗಿಯೇ ಇಟ್ಟುಕೊಂಡು ಈಗಲೂ ಪೂಜಿಸುತ್ತಿದ್ದಾನೆ ಎನ್ನುವುದು ಹತ್ತಿರದಿಂದ ಕಂಡವರ ಮನಸಿನ ಮಾತು. ಆತನ ಫೇಸ್‌ಬುಕ್ ತಾಣದಲ್ಲೂ ಸಂಬಂಧದ ವಿಚಾರ ಬಂದಾಗ ಈಗಲೂ 'ನಿಶ್ಚಿತಾರ್ಥ ಆಗಿದೆ' ಎಂಬುದನ್ನು ಬದಲಿಸಿಲ್ಲ. ಆತನಿಗಿನ್ನೂ ಆಕೆ ವಾಪಸು ಬರಬಹುದೆಂಬ ಆಸೆ. ಆತನ ಕನಸುಗಳಿನ್ನೂ ಚಳಿ ಬಿಡದೆ ಆಕೆಯನ್ನೇ ನಿರೀಕ್ಷಿಸುತ್ತಿವೆ.

ಅತ್ತ ಆಕೆಯ ಹೃದಯಕ್ಕೆ 'ಸ್ಲಮ್' ನಾಯಕ ದೇವ್ ಪಟೇಲ್ ಕನ್ನ ಹಾಕಿದ್ದಾನೆ ಎಂದೂ ಹೇಳಲಾಗುತ್ತದೆ. ಇಬ್ಬರದ್ದೂ ಹದಿನೆಂಟರ ಟೀನೇಜ್. ಆದರೂ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ಪಟೇಲ್, "ಅವಳು ಸುಂದರಿ. ಖಂಡಿತವಾಗಿಯೂ ಅದ್ಭುತವಾಗಿದ್ದಾಳೆ. ಎಲ್ಲರೂ ಒಪ್ಪುವಂತಹ ಮಾತೇ. ಆದರೆ ನಮ್ಮ ನಡುವೆ ರೊಮ್ಯಾನ್ಸ್ ಇಲ್ಲ" ಎಂದಿದ್ದ.

ಒಳಗಿನ ಗುಟ್ಟು ಶಿವನೇ ಬಲ್ಲ. ಆಕೆಯೂ ಬಹಿರಂಗವಾಗಿ ಹೇಳುತ್ತಿಲ್ಲ. ಆತನೋ ಪ್ರೀತಿ ಸಾರ್ವಜನಿಕ ಸೊತ್ತಲ್ಲ. ಅದು ನಮ್ಮಿಬ್ಬರದು ಎಂದು ನಂಬಿಕೊಂಡವ. ನಾವೂ ಈ ಕಿವಿಯಿಂದ ಕೇಳಿ ಆ ಕಿವಿಯಿಂದ ಬಿಟ್ಟು ಬಿಡೋಣ... ಏನಂತೀರಾ?

ಸ್ಲಮ್ ಸುಂದರಿ ಪಿಂಟೋ ಮದುವೆ ವೃತ್ತಾಂತ..!


Share this Story:

Follow Webdunia kannada