Select Your Language

Notifications

webdunia
webdunia
webdunia
webdunia

ತುಳಸಿ ಶ್ರೀಕೃಷ್ಣನಿಗೆ ಪ್ರಿಯ ಯಾಕೆ ಗೊತ್ತಾ?

webdunia
ಬೆಂಗಳೂರು , ಶನಿವಾರ, 29 ಡಿಸೆಂಬರ್ 2018 (09:07 IST)
ಬೆಂಗಳೂರು: ಹಿಂದೂ ಸಂಪ್ರದಾಯ ಪ್ರಕಾರ ಪೂಜಾ ವಿಧಿಗಳಲ್ಲಿ ಪ್ರಮುಖವಾಗಿ ಬೇಕಾದ ವಸ್ತುಗಳಲ್ಲಿ ತುಳಸಿ ಕೂಡಾ ಒಂದು. ತುಳಸಿ ಮಹಾವಿಷ್ಣುವಿಗೂ ಪ್ರಿಯವಾದ ಎಲೆ. ಯಾಕೆ ಗೊತ್ತಾ?


ಇದಕ್ಕೆ ಎರಡು ಕಾರಣಗಳನ್ನು ಕೊಡಬಹುದು. ಒಂದು, ಮಹಾವಿಷ್ಣುವಿನ ಪತ್ನಿಯೇ ಆಗಿದ್ದಳಂತೆ. ಹಿಂದೂ ಪುರಾಣದ ಪ್ರಕಾರ ಮಹಾವಿಷ್ಣುವಿಗೆ ತುಳಸಿ ಪ್ರಿಯವಾದವಳು. ಇವರಿಬ್ಬರ ವಿವಾಹ ದಿನವನ್ನು ಇಂದಿಗೂ ಕಾರ್ತಿಕ ಮಾಸದಲ್ಲಿ ಇಂದಿಗೂ ಹಬ್ಬವಾಗಿ ಆಚರಿಸಲಾಗುತ್ತದೆ.

ಇನ್ನು, ಮಹಾವಿಷ್ಣುವಿನ ಅವತಾರವಾದ ಶ್ರೀಕೃಷ್ಣನಿಗೆ ತುಳಸಿ ಎಷ್ಟು ಪ್ರೀತಿಯೆಂದರೆ ಒಮ್ಮೆ ಶ್ರೀಕೃಷ್ಣನಿಗೆ ಚಿನ್ನದ ತುಲಾಭಾರ ಮಾಡುವಾಗ ಸತ್ಯಭಾಮೆ ಎಷ್ಟೇ ಚಿನ್ನದ ಆಭರಣಗಳನ್ನು ತಂದು ಹಾಕಿದರೂ ತಕ್ಕಡಿ ಸಮವಾಗಲಿಲ್ಲವಂತೆ. ಆಗ ರುಕ್ಮಿಣಿ ಒಂದು ಎಲೆ ತುಳಸಿಯನ್ನು ತಕ್ಕಡಿಗೆ ಹಾಕಿದಾಗ ಅದು ಸಮನಾಯಿತು ಎಂಬ ಕತೆಯಿದೆ. ಇವೆರಡೂ ಕತೆಗಳು ತುಳಸಿ ಮಹಾವಿಷ್ಣುವಿಗೆ ಎಷ್ಟು ಪ್ರೀತಿ ಎಂಬುದನ್ನು ಸಾರುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ನಾವು ಮಾಡಿದ ಪಾಪ ಕೃತ್ಯಕ್ಕೆ ಕ್ಷಮೆ ಸಿಗಲು ದೇವಿಯ ಈ ಮಂತ್ರ ಹೇಳಿದರೆ ಸಾಕು!