Publish Date: Wed, 11 Jul 2018 (09:35 IST)
Updated Date: Wed, 11 Jul 2018 (09:36 IST)
ಬೆಂಗಳೂರು: ದೇವಾಲಯಗಳಿಗೆ ಹೋದರೆ ನಾವು ದೇವರ ಯಾವ ಭಾಗದಲ್ಲಿ ನಿಂತು ನಮಸ್ಕರಿಸಿದರೆ ನಾವು ಹೆಚ್ಚು ದೇವತಾನುಗ್ರಹಕ್ಕೆ ಪಾತ್ರರಾಗುತ್ತೇವೆ?
ದೇವತಾನುಗ್ರಹ ನಮಗೆ ಬೇಕೆಂದರೆ ನಾವು ದೇವರಿಗೆ ಲಿಂಗ, ಮೂರ್ತಿ, ವಿಗ್ರಹ ಯಾವುದೇ ರೂಪದಲ್ಲಿದ್ದರೂ ಬಲ ಭಾಗದಲ್ಲಿ ನಿಂತು ನಮಸ್ಕರಿಸುವುದು ಸೂಕ್ತ.
ಏಕೆಂದರೆ ದೇವರು ಅಸ್ತು ಎಂದು ಪ್ರಸನ್ನ ಚಿತ್ತನಾಗಿ, ನಿರ್ಮಲನಾಗಿ ವರಪ್ರಸಾದವನ್ನು ಕರುಣಿಸುವುದು ಬಲಭಾಗದಿಂದ. ಅಂದರೆ ಬಲಕೈಯಲ್ಲಿ. ಬದಲಾಗಿ ಎಡ ಭಾಗದಿಂದ, ಎಡಭಾಗಕ್ಕೆ ಅಲ್ಲ.
ಎಡಭಾಗ ಅಂದರೆ ವಾಮ ಭಾಗದ ಅಧಿಪತಿ ಯಮ. ಅಂದರೆ ಮೃತ್ಯು. ಯಾವುದೇ ದೇವತಾ ಶಕ್ತಿಯ ಬಲಭಾಗ ಅನುಗ್ರಹ ಸೂಚಕ. ಇದೇ ಕಾರಣಕ್ಕೆ ಬಲಭಾಗದಿಂದ ನಮಸ್ಕರಿಸುವುದು ಒಳಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.