Photo Courtesy: facebookಬೆಂಗಳೂರು: ಇಂದು ಯುಗಾದಿ ಹಬ್ಬ. ಹಿಂದೂ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸಂಭ್ರಮದ ದಿನ.ಬೇವು-ಬೆಲ್ಲ ಸೇವಿಸಿ ದಿನದಾರಂಭ ಮಾಡಿದರೆ ಮಧ‍್ಯಾಹ್ನಕ್ಕೆ ಭರ್ಜರಿ ಭೋಜನ ಸವಿಯಬಹುದು. ಯುಗಾದಿ ಸ್ಪೆಷಲ್ ಲಂಚ್ ಮೆನು ಹೇಗಿರಬೇಕು ಗೊತ್ತಾ?ಯಾವತ್ತಿನಂತೆ ಅನ್ನ ಸಾರು, ಜೊತೆಗೆ ಮಾವಿನ ಕಾಯಿ ಚಿತ್ರಾನ್ನ, ಮೊಸರನ್ನ, ಕೋಸಂಬರಿ, ಹೆಸರು ಬೇಳೆ ಅಥವಾ ಕಡಲೆ ಬೇಳೆ ಪಾಯಸ, ಒಬ್ಬಟ್ಟು, ಒಂದು ಬಗೆ ಪಲ್ಯ ಇದ್ದರೆ ಯುಗಾದಿ ಮಧ್ಯಾಹ್ನದ ಭೋಜನ ಬೊಂಬಾಟ್ ಆಗಿರುತ್ತದೆ! ಮಾಡಿ ನೋಡಿ!