Publish Date: Fri, 21 Dec 2018 (09:20 IST)
Updated Date: Fri, 21 Dec 2018 (09:21 IST)
ಬೆಂಗಳೂರು: ವಾಸ್ತು ಪ್ರಕಾರ ಕೆಲವು ಮನೆಯಲ್ಲಿ ಇಟ್ಟುಕೊಳ್ಳುವುದು ದುರಾದೃಷ್ಟವನ್ನು ಆಹ್ವಾನಿಸಿಕೊಂಡಂತೆ. ಯಾವೆಲ್ಲಾ ವಸ್ತುಗಳು ಮನೆಯಲ್ಲಿ ಇರಬಾರದು?
ಪಾಪಸ್ ಗಿಡ, ಮುಳ್ಳಿನ ಗಿಡವನ್ನು ಅಲಂಕಾರಕ್ಕೆಂದು ಮನೆಯಲ್ಲಿ ಇಟ್ಟುಕೊಳ್ಳಬಾರದು. ಅದೇ ರೀತಿ ಪ್ಲಾಸ್ಟಿಕ್ ಹೂವುಗಳು, ಪ್ಲಾಸ್ಟಿಕ್ ಗಿಡಗಳನ್ನು ಮನೆಯಲ್ಲಿಟ್ಟುಕೊಳ್ಳುವುದು ಒಳ್ಳೆಯದಲ್ಲ.
ಹಾಗೇ ಕೆಲವರು ತಮ್ಮ ಮನೆಯ ಶೋಕೇಸ್ ನಲ್ಲಿ ಪ್ರೇಮದ ಸಂಕೇತವಾಗಿ ತಾಜ್ ಮಹಲ್ ನ್ನು ಇಟ್ಟುಕೊಳ್ಳುತ್ತಾರೆ. ಆದರೆ ಈ ರೀತಿ ತಾಜ್ ಮಹಲ್ ನ ಪ್ರತಿರೂಪವನ್ನೂ ಇಟ್ಟುಕೊಳ್ಳಬಾರದು! ಎಷ್ಟೇ ಸುಂದರವಾಗಿದ್ದರೂ ಇದು ಒಂದು ಸಮಾಧಿ. ಹಾಗಾಗಿ ಇದನ್ನು ಮನೆಯಲ್ಲಿಟ್ಟುಕೊಳ್ಳುವುದೂ ದುರಾದೃಷ್ಟವನ್ನು ಆಹ್ವಾನಿಸಿದಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ