ಕಾಲಿನ ಪಾದ ತೊಳೆಯುವಾಗ ಈ ವಿಚಾರ ನೆನಪಿರಲಿ!

ಗುರುವಾರ, 20 ಡಿಸೆಂಬರ್ 2018 (09:26 IST)
ಬೆಂಗಳೂರು: ಹೊರಗಡೆ ಎಲ್ಲಾ ಸುತ್ತಾಡಿಕೊಂಡು ಬಂದು ಮನೆಯೊಳಗೆ ಕಾಲಿಡುವ ಮೊದಲು ಕಾಲು ತೊಳೆದುಕೊಳ್ಳುವ ಪದ್ಧತಿ ಸಾಮಾನ್ಯವಾಗಿ ಎಲ್ಲರಲ್ಲೂ ಇದೆ.


ಆದರೆ ಪಾದ ತೊಳೆಯುವ ಮೊದಲು ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತೊಳೆಯಬೇಕು. ಇಲ್ಲವಾದರೆ ಸಂಕಷ್ಟ ತಪ್ಪದು.

ಕಾಲು ತೊಳೆಯುವಾಗ ಪೂರ್ತಿ ಪಾದ ಒದ್ದೆಯಾಗುವಂತೆ ತೊಳೆಯಬೇಕು. ಅದರಲ್ಲೂ ಮೊದಲು ಕಾಲಿನ ಹಿಂಭಾಗ ಒದ್ದೆ ಮಾಡಬೇಕು. ಕಾಲು ತೊಳೆಯುವಾಗ ಕಾಲಿನ ಹಿಂಭಾಗಕ್ಕೆ ನೀರು ಸೋಕದೇ ಇದ್ದರೆ ಶನಿಯ ವಕ್ರ ದೃಷ್ಟಿ ಬಿದ್ದು, ದುರಾದೃಷ್ಟ ಹಿಂಬಾಲಿಸುತ್ತದೆ ಎಂಬ ನಂಬಿಕೆಯಿದೆ. ಹಾಗೆಯೇ ದೇವರಿಗೆ ಕೈ ಮುಗಿಯುವ ಮೊದಲು ಕಾಲಿನ ಒದ್ದೆ ಸಂಪೂರ್ಣವಾಗಿ ಒರೆಸಿ ಪ್ರಾರ್ಥನೆ ಮಾಡಿದರೆ ಶುಭ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಚಪ್ಪಲಿಗೂ ನಿಮ್ಮ ವೃತ್ತಿ ಜೀವನದ ಯಶಸ್ಸಿಗೂ ಸಂಬಂಧವಿದೆ!