Select Your Language

Notifications

webdunia
webdunia
webdunia
webdunia

ದೇವಾಲಯದಲ್ಲಿ ನಾವು ಗೊತ್ತಿದ್ದೋ, ಗೊತ್ತಿಲ್ಲದೆಯೋ ಮಾಡುವ ಅಪರಾಧಗಳು ಯಾವುವು ಗೊತ್ತಾ?

ದೇವಾಲಯದಲ್ಲಿ ನಾವು  ಗೊತ್ತಿದ್ದೋ, ಗೊತ್ತಿಲ್ಲದೆಯೋ ಮಾಡುವ ಅಪರಾಧಗಳು ಯಾವುವು ಗೊತ್ತಾ?
ಬೆಂಗಳೂರು , ಶನಿವಾರ, 8 ಡಿಸೆಂಬರ್ 2018 (08:39 IST)
ಬೆಂಗಳೂರು: ದೇವಾಲಯಕ್ಕೆ ಹೋಗುವಾಗ ನಾವು ಹೇಗಿರಬೇಕು ಎಂಬುದಕ್ಕೆ ಕೆಲವು ಶಿಷ್ಟಾಚಾರಗಳಿವೆ. ಹಾಗಿದ್ದರೂ ದೇವಾಲಯದಲ್ಲಿ ನಮಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಕೆಲವು ತಪ್ಪುಗಳನ್ನು ಮಾಡುತ್ತೇವೆ. ಅದು ಯಾವುವು ನೋಡೋಣ.


  • ಭಗವಂತನ ಮಂದಿರಕ್ಕೆ ಕೈ ಕಾಲು ತೊಳೆಯದೇ ಪ್ರವೇಶ ಮಾಡುವುದು.
  • ಸಾಕ್ಸ್ ಹಾಕಿಕೊಂಡು ಪ್ರವೇಶಿಸುವುದು
  • ಭಗವಂತನ ಮಂದಿರಕ್ಕೆ ಬೀಡಿ, ಸಿಗರೇಟು, ಮಾಂಸ, ಮಧ್ಯ ಸೇವಿಸಿ ಪ್ರವೇಶಿಸುವುದು.
  • ಚರ್ಮದ ಬೆಲ್ಟ್, ಚಪ್ಪಲಿ ಧರಿಸಿಕೊಂಡು ಹೋಗುವುದು.
  • ಭಗವಂತನ ಎದುರು ಸನ್ಮಾನ ಮಾಡಿಸಿಕೊಳ್ಳುವುದು.
  • ಕೊಳೆತ, ಕೆಟ್ಟ ಅಥವಾ ಒಣಗಿದ ಹೂ/ಹಣ್ಣುಗಳನ್ನು ಅರ್ಪಿಸುವುದು.
  • ದೇವಾಲಯದ ಹೊಸ್ತಿಲು, ಕಿಟಿಕಿಗಳಲ್ಲಿ ಕರ್ಪೂರ ಹಚ್ಚುವುದು.
  • ದೇವಾಲಯಕ್ಕೆ ಅರ್ಪಿಸಿದ ಸಾಮಗ್ರಿಗಗಳನ್ನು ಅಂಗಡಿಗಳಿಗೆ ಮಾಡಿ ಮತ್ತೆ ಅದೇ ಸಾಮಗ್ರಿಗಳನ್ನು ಬೇರೆ ಭಕ್ತರ ಮೂಲಕ ದೇವರಿಗೆ ಅರ್ಪಿಸುವುದು.
  • ಭಗವಂತನ ಸಮ್ಮುಖ ಹೋಗಿ ದೇವರ ದರ್ಶನ ಪಡೆಯದೇ ಇರುವುದು.
  • ಭಗವಂತನ ಸಮ್ಮುಖದಲ್ಲಿಯೇ ಪ್ರದಕ್ಷಿಣೆ ಮಾಡುವುದು, ನೆಲಕ್ಕೆ ಬಾಗಿ ನಮಸ್ಕರಿಸದೇ ಇರುವುದು.
  • ಕಾಲು ಚಾಚಿ ಕೂರುವುದು ಮತ್ತು ಕುರ್ಚಿ ಇನ್ನಿತರ ಆಸನಗಳಲ್ಲಿ ಕೂರುವುದು.
  • ಭಗವಂತನ ಸಮ್ಮುಖ ಭೋಜನ ಮಾಡುವುದು.
  • ದೇವಾಲಯದಲ್ಲಿ ಬೇರೆಯವರಿಗೆ ಕೆಡುಕು ಉಂಟುಮಾಡುವುದು, ಕೆಟ್ಟ ಮಾತನಾಡುವುದು.
  • ಭಗವಂತನ ಸಮ್ಮುಖ ಆಕಳಿಸುವುದು, ಅಧೋವಾಯುವನ್ನು ತ್ಯಜಿಸುವುದು.
  • ಭಗವಂತನ ವಿಗ್ರಹಕ್ಕೆ ಬೆನ್ನು ತೋರಿಸಿ ಕೂರುವುದು.
  • ದೇವಾಲಯದಲ್ಲಿ ಉಗುರು ಕಡಿಯುವುದು, ಕಣ್ಣು, ಕಿವಿ, ಮೂಗುಗಳಿಗೆ ಬೆರಳು ತೂರುವುದು.
  • ಪ್ರಸಾದ ರೂಪದಲ್ಲಿ ಸಿಕ್ಕ ವಸ್ತುಗಳನ್ನು ದೇವಾಲಯದಲ್ಲಿಯೇ ಭಿಕ್ಷೆ ನೀಡುವುದು.
ಇತ್ಯಾದಿಗಳನ್ನು ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡುತ್ತಿರುತ್ತೇವೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ದೇವಾಲಯ ಪ್ರವೇಶಿಸಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಮಧುರೈ ಮೀನಾಕ್ಷಿ ದೇವಾಲಯದ ಈ ಬೆರಗಾಗುವ ಕತೆ ನಿಮಗೆ ಗೊತ್ತಾ?!