Select Your Language

Notifications

webdunia
webdunia
webdunia
webdunia

ಮಧುರೈ ಮೀನಾಕ್ಷಿ ದೇವಾಲಯದ ಈ ಬೆರಗಾಗುವ ಕತೆ ನಿಮಗೆ ಗೊತ್ತಾ?!

ಮಧುರೈ ಮೀನಾಕ್ಷಿ ದೇವಾಲಯದ ಈ ಬೆರಗಾಗುವ  ಕತೆ ನಿಮಗೆ ಗೊತ್ತಾ?!
ಬೆಂಗಳೂರು , ಶನಿವಾರ, 8 ಡಿಸೆಂಬರ್ 2018 (08:33 IST)
ಬೆಂಗಳೂರು: ಮಧುರೈ ಮೀನಾಕ್ಷಿ ದೇವಾಲಯದ ಬಗ್ಗೆ ನೀವೆಲ್ಲರೂ ಕೇಳಿರುತ್ತೀರಿ. ಈ ಪ್ರಸಿದ್ಧ ಕ್ಷೇತ್ರದ ದೇವಿಯ ಮಂದಿರದಲ್ಲಿ ಶ್ರೀಚಕ್ರ ಸ್ಥಾಪನೆಯಾಗಿದ್ದು ಹೇಗೆ ಗೊತ್ತಾ?


ಇಲ್ಲಿ ಶ್ರೀಚಕ್ರವನ್ನು ಸ್ಥಾಪನೆ ಮಾಡಿದವರು ಶ್ರೀ ಶಂಕರಾಚಾರ್ಯರು. ಅವರು ಮೊದಲು ಶ್ರೀಚಕ್ರ ಸ್ಥಾಪನೆ ಮಾಡಿದ್ದು ಇಲ್ಲಿಯೇ. ಕಾಳಿ ಸ್ವರೂಪದಲ್ಲಿದ್ದ ದೇವಿಯನ್ನು ತಮ್ಮ ಸ್ತೋತ್ರಗಳಿಂದ ಸಂಪನ್ನಗೊಳಿಸಿದರು.

ಕಾಳಿ ಸ್ವರೂಪದಲ್ಲಿದ್ದ ಮಧುರೈ ಮೀನಾಕ್ಷಿ ದೇವಿಯನ್ನು ಬಾಲಕ ಸಾಕ್ಷಾತ್ ಪರಮೇಶ್ವರನ ಸ್ವರೂಪ ಶಂಕರಾಚಾರ್ಯರು ಪಗಡೆ ಆಟದ ನೆಪದಲ್ಲಿ ಮಂತ್ರಶಕ್ತಿಯಿಂದ ಗೆರೆಗಳನ್ನು ಎಳೆದು ದೇವಿಯನ್ನು ಅದರಲ್ಲಿ ಬಂಧಿಸಿದರು.

ಕಾಳಿ ಸ್ವರೂಪದಲ್ಲಿದ್ದ ಮೀನಾಕ್ಷಿ ದೇವಿಗೆ ತಾನು ಗೆರೆಗಳ ಮಧ್ಯೆ ಬಂಧನವಾಗಿದ್ದು ಅರಿವಾದಾಗ ಈತ ಸಾಧಾರಣ ಬಾಲಕನಲ್ಲ ಎಂಬುದು ಮನದಟ್ಟಾಗುತ್ತದೆ. ಆಗ ದೇವಿ ತನ್ನನ್ನು ಬಂಧಮುಕ್ತಗೊಳಿಸು ಎಂದು ಬಾಲಕನಲ್ಲಿ ಕೇಳಿಕೊಳ್ಳುತ್ತಾಳೆ. ಆಗ ಬಾಲಕ ಶಂಕರಾಚಾರ್ಯರು ನೀನು ಕಾಳಿ ರೂಪ ಬಿಟ್ಟು ಮಾತೃ ಸ್ವರೂಪಕ್ಕೆ ಬಂದರೆ ಬಂಧ ಮುಕ್ತಗೊಳಿಸುವೆ ಎಂದು ಸವಾಲು ಹಾಕುತ್ತಾರೆ.

ಬಾಲಕನ ಮಂತ್ರ ಮುಗ್ಧತೆಗೆ ತಲೆಬಾಗಿ ದೇವಿ ಮಾತೃಸ್ವರೂಪ ಪಡೆಯುತ್ತಾಳೆ. ಹೀಗಾಗಿ ಈವತ್ತಿಗೂ ನೀವು ಗಮನಿಸಬಹುದು, ಮಧುರೈ ಮೀನಾಕ್ಷಿ ದೇವಿಯ ಮೂರ್ತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಆಕೆ ಹಸನ್ಮುಖಿಯಾಗಿರುತ್ತಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಮಾಟ, ಮಂತ್ರಗಳ ಕಾಟದಿಂದ ಮುಕ್ತಿ ಪಡೆಯಲು ಯಾವ ಪೂಜೆ ಮಾಡಬೇಕು?