Daily Horoscope
✕

ಸಂಕ್ರಾಂತಿ ದಿನ ಈ ಮೂರು ವಸ್ತು ದಾನ ಮಾಡಲು ಮರೆಯದಿರಿ

Krishnaveni K
ಬುಧವಾರ, 14 ಜನವರಿ 2026 (09:01 IST)
Photo Credit: Instagram
ಬೆಂಗಳೂರು: ಸಂಕ್ರಾಂತಿ ಹಬ್ಬದ ಸಡಗರ ಎಲ್ಲೆಡೆ ಮನೆ ಮಾಡಿದೆ. ಸಂಕ್ರಾಂತಿ ಹಬ್ಬದ ದಿನ ಈ ಮೂರು ವಸ್ತುಗಳನ್ನು ದಾನ ಮಾಡಲು ಮರೆಯಬೇಡಿ.

ಸಂಕ್ರಾಂತಿ ಎಂದರೆ ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಕಾಲ. ದಕ್ಷಿಣಾಯನ ಮುಗಿದು ಉತ್ತರಾಯಣ ಕಾಲ ಶುರುವಾಗುತ್ತದೆ. ಈ ಸಂದರ್ಭದಲ್ಲಿ ಸಕಲ ದೋಷಗಳ ನಿವಾರಣೆಗೆ ಬಡವರಿಗೆ ದಾನ ಮಾಡುವುದು ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲಾಗಿದೆ.

ವಿಶೇಷವಾಗಿ ಇಂದು ಮೂರು ವಸ್ತುಗಳನ್ನು ದಾನ ಮಾಡಲು ಮರೆಯಬೇಡಿ ಎಳ್ಳು, ಬೆಲ್ಲ ಮತ್ತು ಮೊಸರು. ಇದಕ್ಕೆ ಕಾರಣವೂ ಇದೆ.
ಎಳ್ಳು ದಾನ: ಕಪ್ಪು ಎಳ್ಳು ದಾನ ಮಾಡುವುದರಿಂದ ಪಾಪ ತೊಡೆದು ಹೋಗುವುದು. ಜೊತೆಗೆ ಸಂಪತ್ತು  ವೃದ್ಧಿಯಾಗಿ ಹಿರಿಯರ ಆಶೀರ್ವಾದ ಸಿಗುವುದು.

ಬೆಲ್ಲ: ಬೆಲ್ಲವನ್ನು ದಾನ ಮಾಡುವುದರಿಂದ ಜೀವನದಲ್ಲಿ ಅದೃಷ್ಟ, ಸಂತೋಷ ಸಿಗುತ್ತದೆ.
ಮೊಸರು: ಮನೆಯಲ್ಲಿ ದಾರಿದ್ರ್ಯ, ಹಣಕಾಸಿನ ತಾಪತ್ರಯಗಳು ದೂರವಾಗಬೇಕಾದರೆ ಮೊಸರು ದಾನ ಮಾಡಬೇಕು.

ಇದರ ಜೊತೆಗೆ ಇಂದು ಕುಂಬಳಕಾಯಿ, ಕಂಬಳಿ,ತುಪ್ಪ, ಹಸಿರು ಬಣ್ಣದ ಬಳೆ ದಾನ ಮಾಡುವುದೂ ಅತ್ಯಂತ ಶ್ರೇಯಸ್ಕರ ಎಂದು ನಂಬಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಎಲ್ಲವನ್ನೂ ನೋಡು

ತಾಜಾ

ನವರಾತ್ರಿ ದಿನಗಳಲ್ಲಿ ಮಾಂಸಾಹಾರ ಸೇವಿಸಬಾರದೇ

ಜ್ಯೋತಿಷ್ಯ ಪ್ರಕಾರ ಚಂದ್ರಗ್ರಹಣ ಸಮಯದಲ್ಲಿ ಹೋಳಿ ಆಡಬಹುದೇ

ಶಿವರಾತ್ರಿಗೆ ಶಿವನಿಗೆ ಪೂಜೆ ಮಾಡುವಾಗ ಹೇಳಬೇಕಾದ ಮಂತ್ರ ಯಾವುದು

ಸಂಕ್ರಾಂತಿ ದಿನ ಈ ಮೂರು ವಸ್ತು ದಾನ ಮಾಡಲು ಮರೆಯದಿರಿ

ಈದ್ ಮಿಲಾದ್ ಯಾಕೆ ಆಚರಿಸುತ್ತಾರೆ, ಏನಿದರ ಮಹತ್ವ

ಮುಂದಿನ ಸುದ್ದಿ
Show comments