Select Your Language

Notifications

webdunia
webdunia
webdunia
webdunia

ತ್ವಚೆಗೆ ಮೊಸರು ಬಳಸಬೇಕು ಏಕೆ?

ತ್ವಚೆಗೆ ಮೊಸರು ಬಳಸಬೇಕು ಏಕೆ?
ಮೈಸೂರು , ಗುರುವಾರ, 25 ನವೆಂಬರ್ 2021 (12:28 IST)
ಮೊಸರು ಸೌಂದರ್ಯ ವರ್ಧಕವಾಗಿ ಬಳಸುವುದು ಪ್ರಾಚೀನವಾದ ಪದ್ಧತಿ. ತಮ್ಮ ಚೆಲುವನ್ನು ಹೆಚ್ಚಿಕೊಳ್ಳುವ ಸಲುವಾಗಿ ಮೊಸರನ್ನು ಮಾಯಿಶ್ಚರೈಸರ್ ಅಥವಾ ಕ್ಲೆನ್ಸರ್ ಆಗಿ ಬಳಸುತ್ತಿದ್ದರು.
ಇದೊಂದು ಅತ್ಯುತ್ತಮವಾದ ಪೋಷಕಾಂಶಗಳನ್ನು ಹೊಂದಿರುವ ಆಹಾರವಾಗಿದ್ದು, ಕರುಳಿನ ಆರೋಗ್ಯ ಹಾಗು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಇದರಲ್ಲಿನ ಲ್ಯಾಕ್ಟಿಕ್ ಆಮ್ಲ, ಕ್ಯಾಲ್ಸಿಯಂ, ವಿಟಮಿನ್ ಬಿ ಇರುವ ಕಾರಣದಿಂದ ಸೌಂದರ್ಯ ಉತ್ಪನ್ನವಾಗಿ ಬಳಸಲಾಗುತ್ತದೆ. ಮೊಸರಿನಲ್ಲಿರುವ ಅಗಾಧ ಪ್ರಮಾಣದ ಪೋಷಕಾಂಶವು ಚರ್ಮವನ್ನು ಬಿಳಿಯಾಗಿಸಿ, ಹೊಳೆಯುಂತೆ ಮಾಡುತ್ತದೆ. ನಿಮ್ಮ ಫೇಸ್ ಪ್ಯಾಕ್ ಗಳಿಗೆ ಮೊಸರನ್ನು ಬಳಸುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು.
webdunia

ಮೊಸರನ್ನು ಚರ್ಮಕ್ಕೆ ಅನ್ವಿಯಿಸಿದಾಗ ಅದರಲ್ಲಿನ ಪೋಷಕಾಂಶಗಳು ಚರ್ಮಕ್ಕೆ ಹೊಂದಿಕೆಯಾಗುತ್ತದೆ. ಇದು ಚರ್ಮಕ್ಕೆ ಕಿರಿಕಿರಿಯನ್ನು ಉಂಟು ಮಾಡುವುದಿಲ್ಲ. ಇದರಲ್ಲಿನ ಸತು, ಕ್ಯಾಲ್ಸಿಯಂ, ಲ್ಯಾಕ್ಟಿಕ್ ಆಮ್ಲ ಮತ್ತು ವಿಟಮಿನ್ ಬಿ ಚರ್ಮಕ್ಕೆ ಪುನ್ ಯೌವನವನ್ನು ನೀಡುತ್ತದೆ. ಹಾಗಾಗಿಯೇ ಫೇಸ್ ಪ್ಯಾಕ್ಗಳಲ್ಲಿ ಹಾಗು ಹೇರ್ ಮಾಸ್ಕ್ಗಳಲ್ಲಿ ಮೊಸರನ್ನು ಸೇರಿಸುತ್ತಾರೆ. ಮೊಸರನ್ನು ಹೇರ್ ಮಾಸ್ಕ್ ನಲ್ಲಿ ಬಳಸುವುದರಿಂದ ಕೂದಲು ರೇಷ್ಮೆಯಂತಾಗುತ್ತದೆ.
ತೇವಾಂಶ
ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲವು ಚರ್ಮವನ್ನು ಹೊರಗಿನಿಂದ ತೇವಾಂಶ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ತ್ವಚೆಯಲ್ಲಿನ ಕಲೆಗಳಿಂದ ಕಾಪಾಡುತ್ತದೆ. ಇದೊಂದು ಅತ್ಯುತ್ತಮವಾದ ಮಾಯಿಶ್ಚರೈಸರ್ ಎಂದೇ ಹೇಳಬಹುದು. ಶುಷ್ಕ ಚರ್ಮ ಹೊಂದಿರುವವರು ತಮ್ಮ ಫೇಸ್ ಪ್ಯಾಕ್ ಗಳಲ್ಲಿ ತಪ್ಪದೇ ಮೊಸರನ್ನು ಬಳಕೆ ಮಾಡಿ.
ಚರ್ಮಕ್ಕೆ ಹೊಳಪು
ಟೈರೋಸಿನೇಸ್ ಕಿಣ್ವವು ಮೆಲನಿನ್ ಉತ್ಪಾದನೆಗೆ ಕಾರಣವಾಗುತ್ತದೆ. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲವು ಕಿಣ್ವದ ರಚನೆಯನ್ನು ತಡೆಯುವುದರಿಂದ ನಿಮ್ಮ ತ್ವಚೆಗೆ ಸಹಜವಾಗಿಯೇ ಹೊಳಪನ್ನು ನೀಡುತ್ತದೆ. ನಿಮ್ಮ ಚರ್ಮವನ್ನು ಬಿಳಿಯಾಗಿಸಲು ಕೆಲವು ಮಿಶ್ರಣದೊಂದಿಗೆ ಮೊಸರನ್ನು ಬಳಕೆ ಮಾಡಬಹುದು. ಮೊಸರನ್ನು ಬಳಸಿ ಚಮತ್ಕಾರ ನೋಡಿ.
ಸುಂದರವಾದ ಚರ್ಮ
ಮುಖ್ಯವಾಗಿ ಮೊಸರಿನಲ್ಲಿ ಸತು ಇದೆ. ಇದು ಚರ್ಮದ ಊರಿಯೂತವನ್ನು ಕಡಿಮೆ ಮಾಡುವುದಲ್ಲದೇ, ಕಿರಿಕಿರಿಯಿಂದ ಪಾರುಮಾಡುತ್ತದೆ. ತ್ವಚೆಯಲ್ಲಿನ ಹೆಚ್ಚುವರಿ ಎಣ್ಣೆಯನ್ನು ತೊಡೆದು ಹಾಕಲು ಕಾರಣವಾಗುತ್ತದೆ. ಶುಷ್ಕ ಅಥವಾ ಎಣ್ಣೆ ಚರ್ಮ ಎಂಬ ಯಾವ ಭೇದ ಭಾವವಿಲ್ಲದೇ, ಮೊಡವೆಗಳು ಉಂಟಾಗುತ್ತದೆ. ವಾಸ್ತವವಾಗಿ, ಮೊಡವೆಯಲ್ಲಿನ ಬ್ಯಾಕ್ಟೀರಿಯಾವನ್ನು ಕೊಲ್ಲಲು ಮೊಸರು ಸಹಾಯ ಮಾಡುತ್ತದೆ. ಹಾಗಾಗಿಯೇ ಎಣ್ಣೆ ಚರ್ಮದವರು ತಪ್ಪದೇ ತಮ್ಮ ಫೇಸ್ ಮಾಸ್ಕ್ ಅಥವಾ ಫೇಸ್ ಪ್ಯಾಕ್ ಗಳಲ್ಲಿ ಮೊಸರನ್ನು ಬಳಸುತ್ತಾರೆ.
ಕಣ್ಣಿನ ಕಪ್ಪು ವಲಯ
ಮುಖ್ಯವಾಗಿ ಒತ್ತಡದ ಜೀವನದಿಂದ ಕಣ್ಣಿನ ಕೆಳೆಗೆ ಕಪ್ಪು ವಲಯವು ಉಂಟಾಗುತ್ತದೆ. ಮೊಸರಿನಲ್ಲಿರುವ ಪೋಷಕಾಂಶವು ಚರ್ಮದ ಮೇಲಿರುವ ಕಲೆಯನ್ನು ಮಾತ್ರ ಹೋಗಲಾಡಿಸದೇ, ಕಣ್ಣಿನ ಕೆಳಗಿರುವ ಕಪ್ಪು ವಲಯವನ್ನು ಬಾರದಂತೆ ತಡೆಯುತ್ತದೆ. ನಿಮಗೆ ತಿಳಿದಿರಲಿ ಮೊಸರು ನಿಸ್ಸಂದೇಹವಾಗಿ ಚರ್ಮವನ್ನು ಬಿಳಿಯಾಗಿಸಲು ಸಹಾಯ ಮಾಡುತ್ತದೆ. ಹಾಗಾಗಿಯೇ ಇದರ ಬಳಕೆ ನಿಮ್ಮ ಕಣ್ಣಿನ ಕಪ್ಪು ವಲಯಕ್ಕೂ ಇರಲಿ.

 

Share this Story:

Follow Webdunia kannada

ಮುಂದಿನ ಸುದ್ದಿ

ಚಳಿಗಾಲದಲ್ಲಿ ಆರೋಗ್ಯಕ್ಕೆ ಖರ್ಜೂರ ಸೇವನೆ ಎಷ್ಟು ಉತ್ತಮ