Select Your Language

Notifications

webdunia
webdunia
webdunia
Friday, 11 April 2025
webdunia

ಕೂದಲಿನಲ್ಲಿರುವ ಎಣ್ಣೆ ಜಿಡ್ಡಿನ ಸಮಸ್ಯೆಗೆ ಇಲ್ಲಿದೆ ನೋಡಿ ಬೆಸ್ಟ್ ಟಿಪ್ಸ್

ಬೆಂಗಳೂರು
ಬೆಂಗಳೂರು , ಬುಧವಾರ, 14 ಆಗಸ್ಟ್ 2019 (08:54 IST)
ಬೆಂಗಳೂರು : ಕೂದಲು ಮೃದುವಾಗಿ, ನಯವಾಗಿ  ಇರಬೇಕೆದು ಎಲ್ಲರೂ ಬಯಸುತ್ತಾರೆ. ಅದಕ್ಕಾಗಿ ಕೂದಲಿಗೆ ಎಣ್ಣೆ ಮಸಾಜ್ ಮಾಡುತ್ತೇವೆ. ಆದರೆ ಸ್ನಾನ ಮಾಡುವಾಗ ಎಷ್ಟೇ  ಶಾಂಪು ಹಾಕಿದರೂ ಈ ಎಣ್ಣೆ ಸರಿಯಾಗಿ ಹೋಗುವುದಿಲ್ಲ. ಇದರಿಂದ ಕೂದಲು ಜಿಡ್ಡು ಜಿಡ್ಡಾಗಿರುತ್ತದೆ.




ಇದನ್ನು ಹೋಗಲಾಡಿಸಲು ನಿಮ್ಮ ಮನೆಗಳಲ್ಲಿರುವ ಪದಾರ್ಥಗಳಿಂದಲೇ ನೈಸರ್ಗಿಕವಾಗಿ ಶ್ಯಾಂಪೂ ತಯಾರಿಸಿ ಬಳಸಿ. ಇದರಿಂದ ನಿಮ್ಮ ಕೂದಲಿನಲ್ಲಿರು ಜಿಡ್ಡುಗಳೆಲ್ಲಾ ಹೋಗಿ ನಯವಾದ ಕೂದಲು ನಿಮ್ಮದಾಗುತ್ತದೆ.


ಅಡುಗೆ ಸೋಡಾ - ಒಂದು ಟೇಬಲ್ ಸ್ಪೂನ್

1 ಕಪ್ ಕುದಿಸಿ ಆರಿಸಿದ ನೀರು

ನಿಂಬೆ ರಸ - 2 ಟೇಬಲ್ ಸ್ಪೂನ್

ಬಾದಾಮಿ ಎಣ್ಣೆ - ಹತ್ತು ಹನಿಗಳು

ನೀಲಗಿರಿ, ಲ್ಯಾವೆಂಡರ್, ಟೀ ಟ್ರೀ ಅಥವಾ ಪುದೀನಾ ಹೀಗೆ ಐದು ರೀತಿಯ ಎಣ್ಣೆಯ ಹನಿಗಳು

ಮೊದಲಿಗೆ ಕಾಯಿಸಿ ತಣ್ಣಗಾದ ನೀರಿನ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಒಂದು ಟೇಬಲ್ ಸ್ಪೂನ್ ಅಡಿಗೆ ಸೋಡಾ ಸೇರಿಸಿ ಚೆನ್ನಾಗಿ ಬೆರೆಸಿ. ಹಾಗೂ ಐದು ರೀತಿಯ ಎಣ್ಣೆಯನ್ನು ಇದಕ್ಕೆ ಸೇರಿಸಿ. ಕೊನೆಗೆ  ನಿಂಬೆ ರಸವನ್ನು ಸೇರಿಸಿ. ಈ ಮಿಶ್ರಣವನ್ನು ಪಂಪ್ ಬಾಟಲಿಯಲ್ಲಿ ತುಂಬಿ, ತಂಪಾದ ಸ್ಥಳದಲ್ಲಿ ಸಂಗ್ರಹಿಸಿಟ್ಟುಕೊಂಡು ಉಪಯೋಗಿಸಿ.



 

Share this Story:

Follow Webdunia kannada

ಮುಂದಿನ ಸುದ್ದಿ

ಸ್ವಪ್ನ ಸ್ಖಲನವಾಗುತ್ತಿಲ್ಲ! ಮುಂದೇನು ಕಾದಿದೆ?