Publish Date: Wed, 14 Aug 2019 (08:46 IST)
Updated Date: Wed, 14 Aug 2019 (08:48 IST)
ಬೆಂಗಳೂರು: ಹದಿಹರೆಯದ ವಯಸ್ಸಿನಲ್ಲಿ ಸ್ವಪ್ನ ಸ್ಖಲನವಾಗುವುದು ಸಾಮಾನ್ಯ. ಆದರೆ ಕೆಲವರಿಗೆ ಸ್ವಪ್ನ ಸ್ಖಲನವಾಗುವುದರ ಬಗ್ಗೆ ಭಯವಿದ್ದರೆ, ಇನ್ನು ಕೆಲವರಿಗೆ ಕೆಲವು ದಿನಗಳಿಂದ ಸ್ವಪ್ನ ಸ್ಖಲನವಾಗದೇ ಇದ್ದರೆ ಸಮಸ್ಯೆಯಾ ಎಂಬ ಭಯವಿರುತ್ತದೆ.
ಅಸಲಿಗೆ, ಇವೆರಡಕ್ಕೂ ಭಯಪಡಬೇಕಿಲ್ಲ. ಹೆಚ್ಚಿನ ವೀರ್ಯಾಣುವಿದ್ದಾಗ ಸ್ವಪ್ನ ಸ್ಖಲನವಾಗುವುದು ಸಾಮಾನ್ಯ. ಒಂದು ವೇಳೆ ಲೈಂಗಿಕ ಚಟುವಟಿಕೆಗೆ ಬೇರೆ ದಾರಿಗಳನ್ನು ಕಂಡುಕೊಂಡಾಗ ಸ್ವಪ್ನ ಸ್ಖಲನ ತಾನಾಗಿಯೇ ನಿಂತು ಹೋಗುತ್ತದೆ. ಇದು ಯಾವುದೇ ಸಮಸ್ಯೆಯ ಲಕ್ಷಣವೆಂದು ಭಯಪಡಬೇಕಿಲ್ಲ. ಇದು ಸಹಜ.