ಬೆಂಗಳೂರು : ಬಿಸಿಲಿನಲ್ಲಿ ಹೆಚ್ಚು ತಿರುಗಾಡುವುದರಿಂದ ನಮ್ಮ ಮುಖ ಕಪ್ಪಾಗುತ್ತದೆ. ಇದರಿಂದ ಮುಖದ ಅಂದ ಕೆಡುತ್ತದೆ. ಇದನ್ನು ತಡೆಯಲು ಈ ವಿಧಾನಗಳನ್ನು ಅನುಸರಿಸಿ.
ಅತಿ ಪ್ರಕಾಶಮಾನವಾದ ಸೂರ್ಯ ಕಿರಣಗಳಿಗೆ ಹೆಚ್ಚು ನಮ್ಮನ್ನು ಒಡ್ಡದಿರುವದು, ಮಾಸ್ಕ್ ಹಾಕುವದು, ಛತ್ರಿಗಳನ್ನು ಬಳಸುವದು, ಸನ್ ಕೋಟ್ ಹಾಕುವುದು. ಸನ್ ಕ್ರೀಮ್'ಗಳನ್ನು ಇಲ್ಲವೆ, ಸನ್ ಪೊಟೆಕ್ಷನ್ ಫ್ಯಾಕ್ಟರ್ ಇರುವ ಜೆಲ್, ಲೋಶನ್, ಕ್ರೀಮ್ ಬಳಸುವುದು. ಅಲೊವೆರಾ ಕ್ರೀಮ್, ಲೋಶನ್‌ಗಳನ್ನು ಉಪಯೊಗಿಸಬಹುದು.
ಮನೆಯಲ್ಲಿ ನೈಸರ್ಗಿಕವಾಗಿ ಮಾಡಿಕೊಳ್ಳಬಹುದಾದ ಮನೆಮದ್ದುಗಳು - ನಿತ್ಯ ಸ್ನಾನಕ್ಕೆ 10 ನಿಮಿಷ ಮೊದಲು ಹಾಲಿನಿಂದ ಮಸಾಜ್ ಮಾಡಿ, ಜೇನುತುಪ್ಪವನ್ನು ಟ್ಯಾನ್ ಆದ ಜಾಗದಲ್ಲಿ ಲೇಪಿಸಿ, 20 ನಿಮಿಷ ಬಿಟ್ಟು ತೊಳೆಯುವುದು. ಟೊಮ್ಯಾಟೊ ರಸವನ್ನು, ಜೇನುತುಪ್ಪವನ್ನು ಹಾಲಿನೊಂದಿಗೆ ಬೆರೆಸಿ ಲೇಪಿಸಿ. ಮೊಸರು, ಲೊಳೆಸರ, ಅರಿಶಿನ ಬೆರೆಸಿ ಲೇಪಿಸಿ, ಹೆಚ್ಚು ನೀರನ್ನು ಸೇವಿಸಿ, ಆ್ಯಂಟಿಆಕ್ಸಿಡೆಂಟ್ ಇರುವ ಹಣ್ಣು, ಆಹಾರವನ್ನು ಸೇವಿಸಿ ಇದನ್ನು ತಡೆಗಟ್ಟಬಹುದಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ