ಕೂದಲು ಒದ್ದೆಯಾಗಿರುವಾಗ ಈ ತಪ್ಪುಗಳನ್ನು ಮಾಡಬೇಡಿ

Krishnaveni K
ಸೋಮವಾರ, 29 ಜುಲೈ 2024 (14:49 IST)
ಬೆಂಗಳೂರು: ಕೂದಲು ಒದ್ದೆಯಾಗಿರುವಾಗ  ನಾವು ಕೆಲವೊಂದು ತಪ್ಪುಗಳನ್ನು ಮಾಡಿದರೆ ಅದರಿಂದ ನಮ್ಮ ಕೂದಲುಗಳಿಗೇ ಹಾನಿಯಾಗಬಹುದು. ಒದ್ದೆ ಕೂದಲಿರುವಾಗ ನಾವು ಏನು ಮಾಡಬಾರದು ಎಂಬುದನ್ನು ಇಲ್ಲಿ ನೋಡಿ.

ಕೂದಲು ಒದ್ದೆಯಾಗಿರುವಾಗ ನಾವು ಯಾವತ್ತೂ ಬಾಚಲು ಹೋಗಬಾರದು. ಕೂದಲು ಒದ್ದೆಯಾಗಿರುವಾಗ ಬಾಚಿಕೊಂಡರೆ ತಲೆಹೊಟ್ಟು ಬರುವ ಸಾಧ್ಯತೆ ಹೆಚ್ಚು. ಅಲ್ಲದೆ ಕೂದಲುಗಳನ್ನು ಕಟ್ಟಿಕೊಳ್ಳುವುದರಿಂದ ಸರಿಯಾಗಿ ನೀರಿನಂಶ ಹೋಗದೇ ಕೆಟ್ಟ ವಾಸನೆ ಬರಬಹುದು. ಅಲ್ಲದೆ ಕೂದಲು ಉದುರುವ ಸಮಸ್ಯೆಯೂ ಬರಬಹುದು.

ತಲೆಸ್ನಾನ ಮಾಡಿ ಬಂದ ತಕ್ಷಣ ಫ್ಯಾನ್ ಹಾಕಿ ಕೂದಲು ಒಣಗಿಸಬೇಡಿ. ಇದರಿಂದ ತಲೆನೋವಿನಂತಹ ಸಮಸ್ಯೆ ಬರಬಹುದು. ಇಲ್ಲವೇ ಕೂದಲು ಅತಿಯಾಗಿ ಡ್ರೈ ಆಗುವುದರಿಂದ ತಲೆಹೊಟ್ಟು, ಸೀಳು ಕೂದಲಿನ ಸಮಸ್ಯೆ ಬರಬಹುದು. ಒದ್ದೆ ಕೂದಲಿರುವಾಗ ತಲೆ ಬಾಚಿಕೊಂಡರೆ ಸಿಕ್ಕು ಬರುವ ಸಾಧ್ಯತೆ ಹೆಚ್ಚು.

ತಲೆನೋವಿನ ಸಮಸ್ಯೆ ಇರುವವರು ಒದ್ದೆ ಕೂದಲಿರುವಾಗ ಒಣಗಿಸಿಕೊಳ್ಳದೇ ಬಿಸಿಲಿಗೆ ಓಡಾಡಿದರೆ ತಲೆನೋವು ಬರುವ ಸಾಧ್ಯತೆಯಿದೆ. ಜೊತೆಗೆ ಒದ್ದೆ ಕೂದಲಿನಲ್ಲಿ ಹೊರಗೆ ಓಡಾಡುವುದರಿಂದ ಶೀತ ಪ್ರಕೃತಿಯವರಿಗೆ ಬೇಗನೇ ನೆಗಡಿ, ಕೆಮ್ಮು ಇತ್ಯಾದಿ ಸಮಸ್ಯೆ ಆರಂಭವಾಗಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಮುಂದಿನ ಸುದ್ದಿ
Show comments