ಪಾದಗಳನ್ನು ಬಿಳಿಯಾಗಿಸಬೇಕೇ…? ಮನೆಯಲ್ಲಿಯೇ ಈ ಪೆಡಿಕ್ಯೂರ್ ಮಾಡಿಕೊಳ್ಳಿ

Webdunia
ಭಾನುವಾರ, 14 ಜನವರಿ 2018 (06:46 IST)
ಬೆಂಗಳೂರು : ಕೆಲವರ ಪಾದಗಳು ನೋಡಲು ತುಂಬಾ ಕಪ್ಪಾಗಿಯೂ, ಅಸಹ್ಯವಾಗಿಯೂ ಇರುತ್ತದೆ. ಅಷ್ಟೇ ಅಲ್ಲದೆ ಉಗುರಿನಲ್ಲಿ ಕೊಳಕು ಕೂಡ ತುಂಬಿರುತ್ತದೆ. ಇದನ್ನು ಮಾಮೂಲಾಗಿ ಸ್ವಚ್ಚ ಮಾಡಿದರೆ ಅದು ಶುಭ್ರವಾಗುವುದಿಲ್ಲ. ಅದಕ್ಕಾಗಿ ನಾವು ಪ್ರತಿಬಾರಿ ಪಾರ್ಲರ್ ಗೆ  ಹೋಗೋಕೆ ಆಗಲ್ಲ. ಅದಕ್ಕಾಗಿ ನಾವು ಮನೆಯಲ್ಲೇ ನಮ್ಮ ಪಾದಗಳನ್ನು ಸುಂದರವಾಗಿಟ್ಟುಕೊಳ್ಳಬಹುದು.

 
ಮೊದಲಿಗೆ  ಉಗುರುಗಳನ್ನುಕಟ್ ಮಾಡಿ ನೈಲ್ ಪಾಲಿಶ್ ಗಳನ್ನು ತೆಗೆದುಕೊಂಡು ಉಗುರು ಬೆಚ್ಚಗಿನ ನೀರಿನಲ್ಲಿ 2 ಚಮಚ ನಿಂಬೆರಸ, 2 ಚಮಚ ಅಡುಗೆ ಸೋಡಾ, ಸ್ವಲ್ಪ ಉಪ್ಪು, 1 ಚಮಚ ನೀವು ಉಪಯೋಗಿಸುವ ಶಾಂಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅದರಲ್ಲಿ ಪಾದಗಳನ್ನು ಇಟ್ಟು 10 ನಿಮಿಷದ ಬಳಿಕ ಸ್ವಲ್ಪ ಶಾಂಪುವನ್ನು ತೆಗೆದುಕೊಂಡು ಪಾದಗಳನ್ನು ಹಾಗು ಉಗುರುಗಳನ್ನು ಚೆನ್ನಾಗಿ ಉಜ್ಜಬೇಕು. ನಂತರ ಸ್ವಚ್ಚ ಮಾಡಿ ಒಂದು ಕಾಟನ್ ಬಟ್ಟೆಯಿಂದ ಒರೆಸಿಕೊಳ್ಳಿ . ನಂತರ 4 ಚಮಚ ಮಲ್ತಾನ್ ಮಿಟ್ಟಿ , 2 ಚಮಚ ನಿಂಬೆರಸ, 2 ಚಮಚ ಆಲೊವೆರಾ ಜೆಲ್ ಹಾಗು ಸ್ವಲ್ಪ ರೋಸ್ ವಾಟರ್ ಹಾಕಿ  ಪೇಸ್ಟ್ ಮಾಡಿ ಪಾದಗಳಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಬೇಕು. 10-15 ನಿಮಿಷದ ನಂತರ ತೊಳೆಯಿರಿ. ನಂತರ ಯಾವುದಾದರೂ ಮೊಶ್ಚರೈಸೆಶನ್ ಕ್ರೀಂ ನ್ನು ಅಥವಾ ಕೊಬ್ಬರಿ ಎಣ್ಣೆಯನ್ನು ಹಚ್ಚಿ. ಇದನ್ನು ವಾರದಲ್ಲಿ 2 ಬಾರಿ ಮಾಡುವುದರಿಂದ ಪಾದಗಳು ಬಿಳಿಯಾಗಿ ಅಂದವಾಗಿಯೂ ಇರುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಿಗೆ ಪದೇ ಪದೇ ಅಜೀರ್ಣವಾಗುವುದು ಯಾಕೆ ಇಲ್ಲಿದೆ ನೋಡಿ ಕಾರಣ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ಮುಂದಿನ ಸುದ್ದಿ
Show comments