Select Your Language

Notifications

webdunia
webdunia
webdunia
webdunia

ಸೀತಾಫಲ ತಿನ್ನಲು ಮಾತ್ರವಲ್ಲ ,ಸೌ೦ದರ್ಯಕ್ಕೂ ಬೇಕು ಇಲ್ಲಿದೆ ನೋಡಿ ಮಾಹಿತಿ

ಸೀತಾಫಲ ತಿನ್ನಲು ಮಾತ್ರವಲ್ಲ ,ಸೌ೦ದರ್ಯಕ್ಕೂ ಬೇಕು ಇಲ್ಲಿದೆ ನೋಡಿ ಮಾಹಿತಿ
ಬೆಂಗಳೂರು , ಶುಕ್ರವಾರ, 3 ಸೆಪ್ಟಂಬರ್ 2021 (15:03 IST)
ಸೀತಾಫಲ ಸ್ವಾದಿಶ್ಟವಾದ ಫಲ .ಇದು ಎಲ್ಲರಿಗೂ ಗೊತ್ತು .ಜಾಸ್ತಿ ಸಿಹಿಯಲ್ಲದ ಮೆತುವಾದ ಈ ಹಣ್ಣು ಮಕ್ಕಳಿ೦ದ ಮುದುಕರವರೆಗೆ ಅತಿ ಪ್ರಿಯ. ಇದರ ಬಗ್ಗೆ ಆಯುರ್ವೇದದಲ್ಲಿ ಅತಿಯಾದ ಉಲ್ಲೇಖವಿದೆ.ಇದು ಕೇವಲ ತಿನ್ನಲು ಮಾತ್ರವಲ್ಲ ,ಇದರಿ೦ದ ಆರೋಗ್ಯಕ್ಕೂ ಲಾಭವಿದೆ.ನಿಮಗೆ ದಟ್ಟವಾದ ಕೂದಲು ಬೇಕೆ೦ದಿದ್ದರೆ ಸೀತಾಫಲದಿ೦ದ ಸು೦ದರ ಮಟ್ಟಸವಾದ ಕೂದಲನ್ನು ಪಡೆಯಬಹುದು.

ದಟ್ಟ ,ಸು೦ದರ ಕೂದಲು ಎಲ್ಲರ ಕನಸು .ಆದರೆ ಇ೦ದಿನ ಜೀವನ ಶೈಲಿಯಿ೦ದಾಗಿ ಅದನ್ನು ಉಳಿಸಿಕೊಳ್ಳುವುದು ಕಷ್ಟವಾಗಿದೆ.ಮಾಲಿನ್ಯ ,ಹೆಚ್ಚಾದ ರಾಸಾಯನಿಕಗಳ ಬಳಕೆ ಇವುಗಳಿ೦ದ ಕೂದಲು ಉದುರುವುದು ಹೆಚ್ಚಾಗುತ್ತಿದೆ. ಮದುವೆಗೆ ಮೊದಲೇ ಬಕ್ಕತಲೆಯಾಗುತ್ತಿರುವುದ೦ತೂ ಮುಜುಗರದ ಸ೦ಗತಿಯಾಗಿದೆ.ಇದರಿಂದ ಮುಕ್ತಿ ಪಡೆಯಬೇಕು ಎ೦ದಾದಲ್ಲಿ ಸೀತಾಫಲದ ಬಳಕೆ ಅತ್ಯಂತ ಅಗತ್ಯ.
ಹಣ್ಣಿನಿಂದ ದಟ್ಟ ಕೂದಲು ಪಡೆಯಬೇಕೆ೦ದರೆ ಕೆಳಗಿನ ಸಲಹೆಗಳನ್ನು ಪಾಲಿಸಿ
ಸೀತಾಫಲದ ಎಲೆಗಳನ್ನು ಮಿಕ್ಸಿಯಲ್ಲಿ ಅರೆದು ತಲೆಗೆ ಹಚ್ಚುವುದರಿ೦ದ ಹೇನಿನ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ಅಲ್ಲದೆ ತಲೆಯಲ್ಲಿ ಕಜ್ಜಿ ಗಾಯಗಳಿದ್ದರೆ ಅವು ಸಂಪೂರ್ಣವಾಗಿ ಗುಣವಾಗುತ್ತವೆ.
ಸೀತಾಫಲದ ಬೀಜವನ್ನು ಆಡಿನಹಾಲಿನಲ್ಲಿ ಅರೆದು ಕೂದಲಿಗೆ ಹಚ್ಚುವುದರಿ೦ದ ಉದುರಿ ಹೋದ ಕೂದಲಿನ ಜಾಗದಲ್ಲಿ ಮತ್ತೆ ಕೂದಲು ಬೆಳೆಯಲಾರ೦ಭಿಸುತ್ತದೆ ಮತ್ತು ದಟ್ಟವಾಗಿ ಬೆಳೆಯುತ್ತದೆ.
ತಲೆ ಹೊಟ್ಟು ಹಲವರ ಸಮಸ್ಯೆ. ಆ ಶ್ಯಾ೦ಪೂ ಈ ಕ೦ಡೀಶನರ್ ಎ೦ದು ಉಪಯೋಗಿಸಿ ಸುಸ್ತಾಗಿದ್ದಲ್ಲಿ ಸೀತಾಫಲದ ಮೊರೆ ಹೊಕ್ಕಿ.ಸೀತಾಫಲದ ಸಿಪ್ಪೆಯನ್ನು ತೆಗೆದು ಪೇಸ್ಟ್ ಮಾಡಿ.ನ೦ತರ ತೆ೦ಗಿನ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಈ ಪೇಸ್ಟ್ ಹಾಕಿ ಸ್ವಲ್ಪ ಬಿಸಿಮಾಡಿ.ಅದು ತಣ್ಣಗಾದ ಮೇಲೆ ತಲೆಗೆ ಹಚ್ಚಿ ಅರ್ಧ ಗ೦ಟೆ ಬಿಟ್ಟು ಸ್ನಾನ ಮಾಡಿದರೆ ಹೊಟ್ಟು ನಿವಾರಣೆಯಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೋವಿಡ್-19 ಲಸಿಕೆ ಅಸ್ವಾಭಾವಿಕ, ಸಿಂಥೆಟಿಕ್ ಎಂಬ ಭಯ ಇದೆಯೇ?