ಬೆಂಗಳೂರು: ಆಹಾರಕ್ಕೂ ನಮ್ಮ ಸೌಂದರ್ಯಕ್ಕೂ ಬಿಡಲಾರದ ನಂಟು. ಸುಂದರ ತ್ವಚೆ ಬೇಕೆಂದರೆ ನಾವು ತಿನ್ನುವ ಆಹಾರವೂ ಆರೋಗ್ಯಕರವಾಗಿರಬೇಕು. ಯಾವೆಲ್ಲಾ ಆಹಾರ ವಸ್ತುಗಳು ನಮ್ಮ ಚರ್ಮವನ್ನು ಕುಲಗೆಡಿಸುತ್ತವೆ ನೋಡೋಣ.
ಉಪ್ಪು
ಉಪ್ಪಿಗಿಂತ ಬೇರೆ ರುಚಿ ಇಲ್ಲ ಎಂಬುದೇನೋ ಸತ್ಯ. ಆದರೆ ಉಪ್ಪು ಜಾಸ್ತಿ ತಿನ್ನುವುದರಿಂದ ನಮ್ಮ ಮುಖದ ತ್ವಚೆ ಜೋತು ಬಿದ್ದಂತಾಗಬಹುದು. ಪ್ರತಿದಿನ 500 ಮಿ. ಗ್ರಾಂಗಿಂತ ಹೆಚ್ಚು ಉಪ್ಪು ತಿನ್ನಬೇಡಿ.
ಡೈರಿ ಉತ್ಪನ್ನಗಳು
ಹಾಲಿನ ಉತ್ಪನ್ನಗಳು ಫೇಸ್ ಪ್ಯಾಕ್ ಮಾಡಿಕೊಳ್ಳುವುದಕ್ಕೆ ಬೆಸ್ಟ್ ಎನ್ನುವುದೇನೋ ನಿಜ. ಆದರೆ ಡೈರಿ ಉತ್ಪನ್ನಗಳನ್ನು ಹೆಚ್ಚು ಸೇವಿಸುವುದರಿಂದ ದೇಹದಲ್ಲಿ ಕೊಬ್ಬಿನಂಶ ಹೆಚ್ಚು ಶೇಖರಣೆಯಾಗುತ್ತದೆ. ಇದರಿಂದ ಮೊಡವೆಯಂತಹ ಸಮಸ್ಯೆಗಳೂ ಸಾಮಾನ್ಯವಾಗುತ್ತದೆ.
ಸಕ್ಕರೆ
ಸಕ್ಕರೆ ನಾಲಿಗೆಗೆ ಸಿಹಿ. ಆದರೆ ಚರ್ಮದ ವಿಷಯದಲ್ಲಿ ಕಹಿ ನೀಡುವುದೇ ಜಾಸ್ತಿ. ಸಕ್ಕರೆ ಸೇವನೆಯಿಂದ ಹಣೆಯ ಮೇಲೆ ನೆರಿಗೆ, ಕಣ್ಣಿನ ಕೆಳಗೆ ಚರ್ಮ ದಪ್ಪವಾಗುವುದು, ಗುಂಡನೆ ಮುಖಾರವಿಂದವಿದ್ದರೆ ಕರಗುವುದು ಮುಂತಾದ ಅಡ್ಡ ಪರಿಣಾಮಗಳಾಗುವುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ