Publish Date: Sat, 20 May 2017 (07:14 IST)
Updated Date: Sat, 20 May 2017 (07:16 IST)
ಬೆಂಗಳೂರು: ಮುಖದ ಚಂದಕ್ಕೆ ಮೆರುಗು ಹೆಚ್ಚಿಸುವುದೇ ಕಣ್ಣುಗಳು. ಕಣ್ಣು ಸುಂದರವಾಗಿರಬೇಕೆಂದರೆ ಹಾಲು ಬಳಸಬಹುದು. ಹೇಗೆ? ನೋಡಿಕೊಳ್ಳಿ.
ಮುಖದ ಆಯಾಸ ಹೋಗಲಾಡಿಸಿ, ಫ್ರೆಶ್ ಆಗಿ ಕಾಣುವಂತೆ ಮಾಡುವಲ್ಲಿ ಹಸಿ ಹಾಲು ಅಥವಾ ತಂಪು ಹಾಲು ಹೆಚ್ಚು ಪ್ರಯೋಜನಕಾರಿ. ಕಣ್ಣುಗಳು ಫ್ರೆಶ್ ಆಗಿರುವಂತೆ ಮಾಡಲು ಈ ಒಂದು ಸಿಂಪಲ್ ರೆಸಿಪಿ ಮಾಡಿ ನೋಡಬಹುದು.
ಒಂದು ಲೋಟದಲ್ಲಿ ತಂಪು ಹಾಲು ತೆಗೆದುಕೊಳ್ಳಿ. ಆ ಹಾಲಿನಲ್ಲಿ 10 ನಿಮಿಷಗಳ ಕಾಲ ಹತ್ತಿಯನ್ನು ಉಂಡೆ ಮಾಡಿ ನೆನೆಸಿಡಿ. ಈಗ ಕಾಲು ಚಾಚಿ, ಕಣ್ಣು ಮುಚ್ಚಿ ಮಲಗಿ. ಈ ವೇಳೆ ತಲೆಯ ಕೂದಲುಗಳಿಗೆ ಹಾಲು ಚೆಲ್ಲಬಾರದೆಂದರೆ ಬಟ್ಟೆ ಸುತ್ತಿಕೊಳ್ಳಬಹುದು.
ನಂತರ ಹಾಲಿನಲ್ಲಿ ನೆನೆಸಿಟ್ಟ ಹತ್ತಿಯ ಉಂಡೆಗಳನ್ನು ಕಣ್ಣಿಗೆ ಇಟ್ಟುಕೊಂಡು 10 ರಿಂದ 15 ನಿಮಿಷ ರಿಲ್ಯಾಕ್ಸ್ ಮಾಡಿಕೊಳ್ಳಿ. ನಂತರ ಕಣ್ಣುಗಳನ್ನು ಶುದ್ಧ ನೀರಿನಿಂದ ತೊಳೆದುಕೊಳ್ಳಿ. ಹೀಗೇ ನಿಯಮಿತವಾಗಿ ಮಾಡುವುದರಿಂದ ಕಣ್ಣಿನ ಕಾಂತಿ ಹೆಚ್ಚುವುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ