Publish Date: Sat, 20 Jan 2018 (08:11 IST)
Updated Date: Sat, 20 Jan 2018 (08:13 IST)
ಬೆಂಗಳೂರು: ಸುಂದರ ಮುಖ, ಕಾಂತಿಯುತ ಮುಖ ನಿಮ್ಮದಾಗಬೇಕು ಎಂಬ ಆಸೆ ಇದ್ದೇ ಇರುತ್ತಲ್ಲಾ? ಹಾಗಿದ್ದರೆ ಸಿಂಪಲ್ಲಾಗಿ ಈ ಟೊಮೆಟೋ ಫೇಸ್ ಪ್ಯಾಕ್ ಮನೆಯಲ್ಲೇ ತಯಾರಿಸಿ ಹಚ್ಚಿ. ಮಾಡೋದು ಹೇಗೆ? ನೋಡಿಕೊಳ್ಳಿ.
ಇದಕ್ಕೆ ಬೇಕಾಗಿರುವುದು ಟೊಮೆಟೊ, ಸೌತೆಕಾಯಿ ಮತ್ತು ಸ್ವಲ್ಪ ಜೇನು ತುಪ್ಪ. ಇದೆಲ್ಲಾ ನಿಮ್ಮ ಅಡುಗೆ ಮನೆಯಲ್ಲಿ ಇದ್ದೇ ಇರುತ್ತದೆ. ಹಾಗಾಗಿ ಹೆಚ್ಚು ಖರ್ಚಿಲ್ಲದೇ ಫೇಸ್ ಪ್ಯಾಕ್ ತಯಾರಿಸಿಕೊಳ್ಳಬಹುದು.
ಮಾಡೋದು ಹೇಗೆ?
ಟೊಮೆಟೋ ಕಿವುಚಿಕೊಂಡು ರಸ ಹಿಂಡಿ. ಸೌತೆಕಾಯಿಯನ್ನೂ ರಸ ತೆಗೆದಿಡಿ. ಇವೆರಡನ್ನು ಮಿಕ್ಸ್ ಮಾಡಿ ಇದಕ್ಕೆ ಸ್ವಲ್ಪ ಜೇನು ತುಪ್ಪವನ್ನೂ ಹಾಕಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಸುಮಾರು 20 ನಿಮಿಷ ಹಾಗೇ ಬಿಡಿ. ನಂತರ ಹದ ಬಿಸಿ ನೀರಿನಿಂದ ಮುಖ ತೊಳೆದುಕೊಳ್ಳಿ. ಇದನ್ನು ನಿಯಮಿತವಾಗಿ ಮಾಡುತ್ತಿದ್ದರೆ ಮುಖದ ಕಾಂತಿ ಹೆಚ್ಚುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ