Select Your Language

Notifications

webdunia
webdunia
webdunia
webdunia

ಬಾಳೆಹಣ್ಣಿನ ಸಿಪ್ಪೆಯ ಮತ್ತಷ್ಟು ಉಪಯೋಗಗಳು

ಬಾಳೆಹಣ್ಣಿನ ಸಿಪ್ಪೆಯ ಮತ್ತಷ್ಟು ಉಪಯೋಗಗಳು
Bangalore , ಗುರುವಾರ, 11 ಮೇ 2017 (08:26 IST)
ಬೆಂಗಳೂರು: ಬಾಳೆಹಣ್ಣು ಸಿಪ್ಪೆಯಲ್ಲಿ ಹಲವು ಉಪಯೋಗಗಳಿವೆ ಎಂದು ನಮಗೆ ಗೊತ್ತು. ಅದರ ಕೆಲವು ಉಪಯೋಗಗಳ ಬಗ್ಗೆ ಈ ಮೊದಲು ಹೇಳಿದ್ದೇವೆ. ಇನ್ನಷ್ಟು ಉಪಯೋಗಗಳನ್ನು ತಿಳಿದುಕೊಳ್ಳೋಣ.

 
ಹಲ್ಲು ಬಿಳಿಯಾಗಿಸಲು
ಹೊಳೆಯುವ, ಬಿಳಿ ಹಲ್ಲು ನಿಮ್ಮದಾಗಬೇಕಿದ್ದರೆ, ಪ್ರತಿದಿನ ಸುಮಾರು ಒಂದು ನಿಮಿಷಗಳಷ್ಟು ಕಾಲ ಬಾಳೆಹಣ್ಣಿನ ಸಿಪ್ಪೆಯಿಂದ ಹಲ್ಲು ಉಜ್ಜಿಕೊಳ್ಳಿ.

ಮೊಡವೆಗೆ
ಮೊಡವೆ ಹಾವಳಿಯಿಂದ ಮುಖ ಅಂದಗೆಟ್ಟಿದ್ದರೆ, ಬಾಳೆಹಣ್ಣಿನ ಸಿಪ್ಪೆಯನ್ನು ಪ್ರತಿ ದಿನ ಸುಮಾರು ಐದು ನಿಮಿಷ ಮುಖಕ್ಕೆ ಉಜ್ಜಿಕೊಳ್ಳಿ.

ಶೂ ಪಾಲಿಶ್ ಮಾಡಲು
ಆಫೀಸಿಗೆ ಹೋಗುವ ಮೊದಲು ಶೂ ಪಾಲಿಶರ್ ಖಾಲಿಯಾಗಿದ್ದರೆ, ಬಾಳೆಹಣ್ಣಿನ ಸಿಪ್ಪೆಯನ್ನು ಪಾಲಿಶ್ ರೀತಿ ಬಳಸಬಹುದು. ಬೆಳ್ಳಿ ಪಾತ್ರೆ ಹೊಳೆಯುವಂತೆ ಮಾಡಲು ಇದನ್ನು ಬಳಸಬಹುದು.

ಒತ್ತಡ ನಿವಾರಣೆಗೆ
ಮಾನಸಿಕ ಒತ್ತಡ ನಿವಾರಣೆಯಾಗಬೇಕಾದರೆ ಬಾಳೆಹಣ್ಣಿನ ಸಿಪ್ಪೆಯನ್ನು ನೀರು ಹಾಕಿ ಚೆನ್ನಾಗಿ ಕುದಿಸಿ ಕಷಾಯದಂತೆ ಮಾಡಿಕೊಂಡು ಕುಡಿಯಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಫ್ರಿಡ್ಜ್ ಸುರಕ್ಷಿತವಾಗಿಡಲು ಕೆಲವು ಸಲಹೆಗಳು