Select Your Language

Notifications

webdunia
webdunia
webdunia
webdunia

ಫ್ರಿಡ್ಜ್ ಸುರಕ್ಷಿತವಾಗಿಡಲು ಕೆಲವು ಸಲಹೆಗಳು

ಫ್ರಿಡ್ಜ್ ಸುರಕ್ಷಿತವಾಗಿಡಲು ಕೆಲವು ಸಲಹೆಗಳು
Bangalore , ಬುಧವಾರ, 10 ಮೇ 2017 (07:27 IST)
ಬೆಂಗಳೂರು: ಮನೆಯಲ್ಲೊಂದು ಫ್ರಿಡ್ಜ್ ಇದ್ದರೆ ಉತ್ತಮ ಎಂದು ಮೂಲೆಯಲ್ಲಿ ತಂದಿಡುತ್ತೇವೆ. ಆದರೆ ಕೆಲವರು ಅದರ ನಿರ್ವಹಣೆ ಮಾಡುವಲ್ಲಿ ಸೋಲುತ್ತಾರೆ. ಫ್ರಿಡ್ಜ್ ಹೇಗಿಟ್ಟುಕೊಳ್ಳಬೇಕು ಎನ್ನುವುದಕ್ಕೆ ಒಂದಷ್ಟು ಸಲಹೆಗಳು.

 
·         ಫ್ರಿಡ್ಜ್ ನ್ನು ಸೂರ್ಯನ ಬೆಳಕು ಬೀಳುವಲ್ಲಿ ಇಡಬೇಡಿ.
·         ಟಿವಿ ಇರುವ ಕಡೆ ಫ್ರಿಡ್ಜ್ ಇಟ್ಟರೆ ಟಿವಿ ಬೇಗನೇ ಹಾಳಾಗುವ ಸಂಭವವೂ ಇದೆ.
·         ಫ್ರಿಡ್ಜ್ ನ ಮೇಲ್ಬಾಗ ಜಾಗವಿದೆಯೆಂದು ಬೇಕಾಬಿಟ್ಟಿ ವಸ್ತುಗಳನ್ನು ತಂದು ಹರಡಬೇಡಿ. ಇದರಿಂದ ಫ್ರಿಡ್ಜ್ ಬೇಗನೇ ಹಾಳಾಗಬಹುದು.
·         ಗೋಡೆಯಿಂದ ಸ್ವಲ್ಪ ಅಂತರ ಬಿಟ್ಟು ಇಟ್ಟುಕೊಳ್ಳಿ.
·         ಆಗಾಗ ಫ್ರಿಡ್ಜ್ ನ ಬಾಗಿಲು ತೆಗೆಯುವ ಬದಲು, ಒಂದೇ ಸಲಕ್ಕೆ ವಸ್ತುಗಳನ್ನು ಇಡುವುದು ಮತ್ತು ತೆಗೆಯುವುದು ಮಾಡಿ.
·         ಫ್ರಿಡ್ಜ್ ನ್ನು ಸಾಬೂನು ಬಳಸಿ ಶುಚಿಗೊಳಿಸಬೇಡಿ. ಉಗುರು ಬೆಚ್ಚಗಿನ ನೀರಿನಲ್ಲಿ ಶುದ್ಧ ಮಾಡಿ.
·         ಫ್ರಿಡ್ಜ್ ಬಾಗಿಲನ್ನು ಅರ್ಧಕ್ಕಿಂತ ಹೆಚ್ಚು ಸಮಯ ತೆರೆದಿಡಬೇಡಿ.
·         ಫ್ರಿಡ್ಜ್ ನಲ್ಲಿ ಬಾಳೆ ಹಣ್ಣು ಇಡಬೇಡಿ. ಕಪ್ಪಾಗುತ್ತದೆ.
·         ಫ್ರಿಡ್ಜ್ ವಾಸನೆ ಬರುತ್ತಿದ್ದರೆ ಉಣ್ಣೆ ಬಟ್ಟೆಯನ್ನು ಫ್ರಿಡ್ಜ್ ನ ಯಾವುದಾದರೂ ಮೂಲೆಯಲ್ಲಿಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಚರ್ಮ, ಕೂದಲಿನ ಕಾಂತಿಗೆ ಹಲಸಿನ ಬೀಜ ತಿನ್ನಿ!