Publish Date: Wed, 28 Feb 2018 (07:12 IST)
Updated Date: Wed, 28 Feb 2018 (07:14 IST)
ಬೆಂಗಳೂರು: ವ್ಯಾಕ್ಸ್ ಮಾಡುವುದಕ್ಕೆಂದು ಪಾರ್ಲರ್ ಗೆ ಹೋಗಿ ನೂರಾರು ರೂಪಾಯಿ ಖರ್ಚು ಮಾಡುತ್ತೇವೆ. ಜತೆಗೆ ಕೆಮಿಕಲ್ ಉಪಯೋಗಿಸಿ ಮಾಡುವ ವ್ಯಾಕ್ಸ್ ನಿಂದ ಚರ್ಮದ ಮೇಲೆ ಕೂಡ ಪರಿಣಾಮ ಬೀರುತ್ತದೆ. ಈ ಸಾಮಾಗ್ರಿಗಳನ್ನು ಉಪಯೋಗಿಸಿಕೊಂಡು ಮನೆಯಲ್ಲಿಯೇ ಸುಲಭವಾಗಿ ವ್ಯಾಕ್ಸ್ ಮಾಡಿಕೊಳ್ಳಿ.
2 ಟೀ ಚಮಚ ಜಿಲೆಟಿನ್
½ ಬೇಕಿಂಗ್ ಸೋಡಾ
2 ಚಮಚ ಹಾಲು
1 ಚಮಚ ಸೌತೆಕಾಯಿ ರಸ
ತಯಾರಿಸುವ ಹಾಗೂ ಉಪಯೋಗಿಸುವ ವಿಧಾನ
ಒಂದು ಬೌಲ್ ಗೆ ಹಾಲು, ಬೇಕಿಂಗ್ ಸೋಡಾ, ಸೌತೆಕಾಯಿ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಬೌಲ್ ಅನ್ನು 10-12 ಸೆಕೆಂಡ್ ಗಳ ಕಾಲ ಮೈಕ್ರೋ ವೇವ್ ಒವೆಲ್ ನಲ್ಲಿಡಿ. ನಂತರ ಇದನ್ನು ತೆಗೆದು ಮತ್ತೊಮ್ಮೆ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣ ದಪ್ಪಗಾಗುತ್ತದೆ. ಈ ಮಿಶ್ರಣ ದಪ್ಪಗಾಗದಿದ್ದರೆ, ಮತ್ತೊಮ್ಮೆ 10 ಸೆಕೆಂಡ್ ನಷ್ಟು ಕಾಲ ಓವೆನ್ ನಲ್ಲಿಡಿ.
ಮೇಕಪ್ ಬ್ರಷ್ ಉಪಯೋಗಿಸಿಕೊಂಡು ಬೇಡದ ಕೂದಲಿರುವ ಜಾಗಕ್ಕೆ ಹಚ್ಚಿಕೊಂಡು ಒಣಗುವ ತನಕ ಬಿಟ್ಟುಬಿಡಿ. ನಂತರ ಹುಷಾರಾಗಿ ಇದನ್ನು ತೆಗೆಯಿರಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ