Publish Date: Thu, 22 Jun 2017 (09:51 IST)
Updated Date: Thu, 22 Jun 2017 (09:56 IST)
ಬೆಂಗಳೂರು: ಕೆಲವರಿಗೆ ಕುಳ್ಳಗಿದ್ದೇನಲ್ಲಾ ಎಂಬ ಚಿಂತೆ. ಕಾಲೇಜಿಗೆ ಹೋದರೆ ಫ್ರೆಂಡ್ಸ್ ಎಲ್ಲಾ ಕುಳ್ಳಿ ಅಂತ ಏನೇನೋ ಅಡ್ಡ ಹೆಸರು ಇಟ್ಟು ತಮಾಷೆ ಮಾಡ್ತಾರೆ ಎನ್ನುವ ಬೇಜಾರು.
ಬೇಸರ ಮಾಡಬೇಡಿ. ಕುಳ್ಳಗಿರುವವರೂ ಉದ್ದ ಕಾಣಲು ಹಲವು ಉಪಾಯಗಳಿವೆ. ಅದಕ್ಕೆ ನಾವು ತೊಡುವ ಡ್ರೆಸ್ ನಲ್ಲೇ ಸ್ವಲ್ಪ ಚೇಂಜಸ್ ಮಾಡಿಕೊಂಡರೆ ಸಾಕು.
ಹೈ ಹೀಲ್ಡ್ ಚಪ್ಪಲಿ: ನಮ್ಮ ಸಿನಿಮಾ ಹೀರೋ ಜಗ್ಗೇಶ್ ಎತ್ತರ ಕಡಿಮೆ ಎನ್ನುವ ಕಾರಣಕ್ಕೆ ಹಿಂದೆಲ್ಲಾ ಎತ್ತರ ಕಾಣುವ ಹಾಗೆ ದಪ್ಪ ಶೂ ಹಾಕಿಕೊಳ್ಳುತ್ತಿದ್ದರಂತೆ. ಹಾಗೆಯೇ ಹುಡುಗಿಯರಾದರೆ ಹೈ ಹೀಲ್ಡ್ ಚಪ್ಪಲಿ ಹಾಕಿಕೊಂಡರೂ ಸಾಕು.
ಲೆಗಿನ್ಸ್ ಉಡುಪು: ಜೀನ್ಸ್ ಅಥವಾ ಲೆಗಿನ್ಸ್ ಪ್ಯಾಂಟ್ ಮತ್ತು ಶಾರ್ಟ್ ಟಾಪ್ ನೀಳ ಕಾಯದವರ ಲುಕ್ ನೀಡುತ್ತದೆ.
ಮ್ಯಾಕ್ಸಿ ಡ್ರೆಸ್ ಗಳು: ಮ್ಯಾಕ್ಸಿ ಡ್ರೆಸ್ ಗಳೆಂದರೆ ಎಲ್ಲರಿಗೂ ಇಷ್ಟವಿರುತ್ತದೆ. ಈ ದಿರಿಸು ಯಾವುದೇ ರೀತಿಯ ದೇಹ ಹೊಂದಿರುವವರಿಗೆ ಸರಿ ಹೊಂದುತ್ತದೆ. ಮ್ಯಾಕ್ಸಿ ಡ್ರೆಸ್ ಜತೆಗೆ ಹೈ ಹೀಲ್ಡ್ ಚಪ್ಪಲಿ ಧರಿಸಿ ನೋಡಿ. ಉದ್ದ ಕಾಣುತ್ತೀರಿ.
ಲಾಂಗ್ ಟಾಪ್ ಕೋಟ್: ಮೊಣಕಾಲುವರೆಗೆ ಬರುವ ನೀಳ ಟಾಪ್ ಕೋಟ್ ಗಳನ್ನು ಧರಿಸಿ ನೋಡಿ. ತನ್ನಿಂತಾನೇ ಎತ್ತರವಿರುವವರಂತೆ ಭಾಸವಾಗುವುದು.
ಈ ಕೆಲವು ಉಪಾಯಗಳನ್ನು ಮಾಡಿ ನೋಡಿ. ದೇಹಕ್ಕೆ ತಕ್ಕ ಉಡುಪು ಧರಿಸುವುದರಲ್ಲೂ ಬದಲಾವಣೆ ಮಾಡಿಕೊಂಡರೆ ಯಾರೂ ನಿಮ್ಮನ್ನು ನೋಡಿ ಕಾಮೆಂಟ್ ಮಾಡುವಂತೆಯೇ ಇಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ