Select Your Language

Notifications

webdunia
webdunia
webdunia
webdunia

ಯೋಗಾಸನ ಮಾಡಿದ ಮಾಜಿ ಪ್ರಧಾನಿ ದೇವೇಗೌಡರು

ಯೋಗಾಸನ ಮಾಡಿದ ಮಾಜಿ ಪ್ರಧಾನಿ ದೇವೇಗೌಡರು
ಬೆಂಗಳೂರು , ಬುಧವಾರ, 21 ಜೂನ್ 2017 (12:00 IST)
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಯೋಗ ಮಾಡಲಾಗುತ್ತಿದೆ. ಉತ್ತರಪ್ರದೇಶದಲ್ಲಿ ಪ್ರಧಾನಿ ನರೇಂದ್ರಮೋದಿ ಯೋಗ ಮಾಡಿದರೆ ಇತ್ತ ಮಾಜಿ ಪ್ರಧಾನಿ ದೇವೇಗೌಡರು ಬೆಂಗಳೂರಿನ ಪದ್ಮನಾಭನಗರದ ನಿವಾಸದಲ್ಲಿ ಯೋಗ ಮಾಡಿದರು.

ಯೋಗ ಸಲಹೆಗಾರರ ಸಹಾಯ ಪಡೆದು ದೇವೇಗೌಡರು ಯೋಗಾಭ್ಯಾಸ ಮಾಡಿದ್ದಾರೆ. ಉತ್ತಮ ಆರೋಗ್ಯಕ್ಕಾಗಿ 6 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿದ್ದು, ಸರ್ವಾಂಗಾಸನವನ್ನ ಸುಲಭವಾಗಿ ಮಾಡುತ್ತಾರೆ ಎಂದು ಯೋಗ ತರಬೇತುದಾರ ಕಾರ್ತಿಕ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಪ್ರಮುಖವಾಗಿ ಮಂಡಿನೋವಿನ ಸಮಸ್ಯೆಯಿಂದ ಗೌಡರು ಯೋಗಾಭ್ಯಾಸ ಮಾಡುತ್ತಿದ್ದಾರೆ.

84ನೇ ವಯಸ್ಸಿನಲ್ಲೂ ದೇವೇಗೌಡರು ಯೋಗಾಭ್ಯಾಸ ಮಾಡಿರುವುದು ಯುವ ಪಡೆಗೆ ಮಾದರಯಾಗಿದೆ. ಯೋಗ ಮಾಡದವರಿಗೆ ಇದು ಕಷ್ಟವೆನಿಸುತ್ತದೆ. ಯೋಗ ಮಾಡುವವರಿಗೆ ತುಂಬಾ ಸುಲಭವಾಗಿರುತ್ತದೆ. ವಯಸ್ಸು ಮುಖ್ಯವಲ್ಲ ೆನ್ನುತ್ತಾರೆ ಯೋಗ ತರಬೇತುದಾರರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಡುಗೆ ಮಾಡಿ ಉಳಿದ ಎಣ್ಣೆಯ ಮರು ಬಳಕೆ ಮಾಡಬಹುದೇ?