Webdunia - Bharat's app for daily news and videos

Install App

ಹೆಂಗಳೆಯರೇ ಗುಲಾಬಿ ರಂಗಿನ ತುಟಿ ನಿಮ್ಮದಾಗಬೇಕೆ ಇಲ್ಲಿದೆ ನೋಡಿ ಸುಲಭ ಟಿಪ್ಸ್!

Webdunia
ಬುಧವಾರ, 7 ಮಾರ್ಚ್ 2018 (07:10 IST)
ಬೆಂಗಳೂರು: ಹೆಣ್ಣುಮಕ್ಕಳಿಗೆ ತಮ್ಮ ತುಟಿಗೆ ಎಷ್ಟೇ ಆರೈಕೆ ಮಾಡಿದರೂ ಕಡಿಮೆ ಅನಿಸುತ್ತೆ. ಗುಲಾಬಿ ರಂಗಿನ ತುಟಿ ಎಂದರೆ ಎಲ್ಲರಿಗೂ ಇಷ್ಟ. ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಹಾಗೂ ರಾಸಾಯನಿಕ ವಸ್ತುಗಳಿಂದ ಕೃತಕ ರಂಗು ಪಡೆಯುವುದಕ್ಕಿಂತ ನೈಸರ್ಗಿಕವಾಗಿ ತುಟಿಯ ರಂಗು ಹೇಗೆ ಹೆಚ್ಚಿಸಬಹುದು ಎಂಬುದಕ್ಕೆ ಇಲ್ಲಿದೆ ನೋಡಿ ಟಿಪ್ಸ್


ತುಟಿಗಳಲ್ಲಿ ತಮ್ಮ ರಂಗು ಕಳೆದುಕೊಂಡು ಕಪ್ಪಾಗಿದ್ದರೆ, ಇದನ್ನು ನಿವಾರಿಸಲು ತುಟಿಗಳಿಗೆ ಸದಾ ಮಾಯಿಶ್ಚರೈಸರ್, ಜೆಲ್ಲಿ ಲಿಪ್ ಬಾಮ್ ಮುಂತಾದುವುಗಳನ್ನು ಬಳಸಿಕೊಂಡು, ತುಟಿಗಳಲ್ಲಿ ತೇವವಿರುವಂತೆ ಎಚ್ಚರಿಕೆ ವಹಿಸಿ. ಹೀಗೆ ಮಾಡುವುದರಿಂದ ತುಟಿಯಲ್ಲಿ ಬಿರುಕು ಮೂಡುವುದಿಲ್ಲ, ಬಣ್ಣವೂ ಬರುತ್ತದೆ.


ದಾಳಿಂಬೆಯ ಬೀಜಗಳನ್ನು ಚೆನ್ನಾಗಿ ಪೇಸ್ಟ್‌ನಂತೆ ಮಾಡಿಕೊಳ್ಳಿ. ನಂತರ, ಇದನ್ನು ತುಟಿಗಳಿಗೆ ಹಚ್ಚಿ. ಹತ್ತರಿಂದ ಹದಿನೈದು ನಿಮಿಷ ಹಾಗೆಯೇ ಬಿಡಿ. ಹೀಗೆ ಮಾಡುವುದರಿಂದ ತುಟಿಗಳ ಸೌಂದರ್ಯ ಹೆಚ್ಚುವುದಲ್ಲದೇ, ತುಟಿಯಲ್ಲಿ ಬಿರುಕು ಮೂಡುವುದಿಲ್ಲ.


ಗುಲಾಬಿ ದಳಗಳನ್ನು ಸ್ವಲ್ಪ ಸಮಯ ಹಾಲಿನಲ್ಲಿ ಮುಳುಗಿಸಿಡಿ. ನಂತರ, ಅದೇ ಹಾಲನ್ನು ಬಳಸಿಕೊಂಡು, ದಳಗಳನ್ನು ಮಿಶ್ರ ಮಾಡಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಒಂದೆರೆಡು ಹನಿ ಗ್ಲಿಸರಿನ್ ಮತ್ತು ಜೇನುತುಪ್ಪವನ್ನು ಬೆರೆಸಿ, ತುಟಿಗಳಿಗೆ ಹಚ್ಚಿ, ಹದಿನೈದು ನಿಮಿಷಗಳ ನಂತರ ಒಣಬಟ್ಟೆಯಿಂದ ಒರೆಸಿ ತೆಗೆಯಿರಿ. ಇದು ತುಟಿಗಳ ಆರೈಕೆಯಲ್ಲಿ ಹೆಚ್ಚು ಉತ್ತಮವಾಗಿರುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ