Select Your Language

Notifications

webdunia
webdunia
webdunia
webdunia

ಆಲೂಗಡ್ಡೆಯ ಈ ಉಪಯೋಗ ನಿಮಗೆ ತಿಳಿದಿದೆಯೇ?

ಆಲೂಗಡ್ಡೆಯ ಈ ಉಪಯೋಗ ನಿಮಗೆ ತಿಳಿದಿದೆಯೇ?
ಬೆಂಗಳೂರು , ಭಾನುವಾರ, 7 ಜನವರಿ 2018 (06:16 IST)
ಬೆಂಗಳೂರು: ಕಪ್ಪು ವರ್ತಲ ಮುಂತಾದ ಚರ್ಮದ ಸಮಸ್ಯೆಗೆ ಆಲೂಗಡ್ಡೆ ರಸವನ್ನು ಬಳಸುವುದು ನಮಗೆ ಗೊತ್ತು. ಆದರೆ ಕೂದಲು ಉದುರುವಿಕೆಗೂ ಆಲೂಗಡ್ಡೆ ಬಳಸಬಹುದು. ಅದು ಹೇಗೆಂದು ನೋಡೋಣ.
 

ಪೊಟೇಷಿಯಂ ಕೊರತೆಯಿಂದಾಗಿ ಕೂದಲು ಉದುರುವಿಕೆ ಸಮಸ್ಯೆಯಿದ್ದರೆ, ಆಲೂಗಡ್ಡೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಇದರಿಂದ ಯಾವುದೇ ಅಡ್ಡ ಪರಿಣಾಮವೂ ಇಲ್ಲ.

ಅದಕ್ಕೆ ಮಾಡಬೇಕಾಗಿರುವುದು ಇಷ್ಟೇ. ಆಲೂಗಡ್ಡೆ ಸಿಪ್ಪೆ ತೆಗೆದು ಜ್ಯೂಸ್ ತೆಗೆದಿಟ್ಟುಕೊಳ್ಳಿ. ಇದಕ್ಕೆ ಒಂದು ಟೇಬಲ್ ಸ್ಪೂನ್ ಜೇನು ತುಪ್ಪ ಹಾಕಿ. ಈ ಮಿಶ್ರಣವನ್ನು ಕೂದಲಿನ ಬೇರುಗಳಿಗೆ ಹಾಕಿ ಚೆನ್ನಾಗಿ ಮಸಾಜ್ ಮಾಡಿ. 15 ನಿಮಿಷಗಳ ನಂತರ ಕೂದಲು ತೊಳೆದುಕೊಳ್ಳಿ. ಹೀಗೇ ನಿಯಮಿತವಾಗಿ ಮಾಡುತ್ತಿದ್ದರೆ, ಕೂದಲು ಉದುರುವಿಕೆ ನಿಯಂತ್ರಣಕ್ಕೆ ಬರುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

2018ರಲ್ಲಿ ಹಾಟ್ ಸೆಕ್ಸ್‌ ಟ್ರೆಂಡ್‌ ಹೇಗಿರಲಿದೆ ಗೊತ್ತಾ?