Select Your Language

Notifications

webdunia
webdunia
webdunia
webdunia

ಒಡೆದ ಹಿಮ್ಮಡಿ ಸಮಸ್ಯೆಗೆ ಹೀಗೆ ಮಾಡಿ..!!

ಒಡೆದ ಹಿಮ್ಮಡಿ ಸಮಸ್ಯೆಗೆ ಹೀಗೆ ಮಾಡಿ..!!
ಬೆಂಗಳೂರು , ಗುರುವಾರ, 16 ಆಗಸ್ಟ್ 2018 (18:35 IST)
ಒಡೆದ ಹಿಮ್ಮಡಿ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯಾ? ಚಳಿಗಾಲ, ಮಳೆಗಾಲದಲ್ಲಿ ಕೈ ಕಾಲಿಗೆ ಬಿರುಕು ಬರುವುದು ಸಾಮಾನ್ಯ, ಹಾಗಂತ ಚರ್ಮದ ಆರೈಕೆ ಮಾಡದಿದ್ದರೆ ಸಹಿಸಲಾರದ ನೋವು ಅನುಭವಿಸಬೇಕಾಗುತ್ತದೆ.
ಒಡೆದ ಹಿಮ್ಮಡಿಯ ನಿವಾರಣೆಗೆ ಮಾರುಕಟ್ಟೆಯಲ್ಲಿ ವಿವಿಧ ರೀತಿಯ, ದುಬಾರಿ ಬೆಲೆಯ ಕ್ರೀಮ್‌ಗಳು ಸಿಗುತ್ತವೆ. ಇಂತಹ ದುಬಾರಿ ಬೆಲೆಯ ಕೆಮಿಕಲ್ ಕ್ರೀಮ್‌ಗಳನ್ನು ಬಳಸುವ ಬದಲು ಮನೆಯಲ್ಲಿಯೇ ಇದಕ್ಕೆ ಪರಿಹಾರ ಮಾಡುವುದು ಹೇಗೆ ಎಂದು ನೋಡೋಣ
 
* ಮಲಗುವ ಮೊದಲು ನಿಂಬೆ ಹಣ್ಣನ್ನು ತುಂಡು ಮಾಡಿ ಸಾಕ್ಸ್‌ನಲ್ಲಿ ಹಾಕಿ, ಆ ಸಾಕ್ಸ್‌ ಅನ್ನು ಧರಿಸಿ ಮಲಗಿ. ಹೀಗೆ 1 ವಾರ ಮಾಡಿದರೆ ನೀವು ಉತ್ತಮ ಫಲಿತಾಂಶವನ್ನು ನೋಡಬಹುದು.
 
* ಸ್ನಾನ ಮಾಡುವಾಗ ಬಾತ್ ಸ್ಟಾಲ್ ಅನ್ನು ನೀರಿಗೆ ಹಾಕಿ ಸ್ನಾನ ಮಾಡಿ.
 
* ವಾರಕ್ಕೆ ಒಮ್ಮೆಯಾದರೂ ಬಿಸಿ ನೀರಿಗೆ ಉಪ್ಪು, ಅಡುಗೆ ಸೋಡಾ ಸೇರಿಸಿ ಕಾಲುಗಳನ್ನು ಅದರಲ್ಲಿ 20 ನಿಮಿಷಗಳ ಕಾಲ ಅದ್ದಿಸಿ, ನಂತರ ಬ್ರಷ್ ಬಳಸಿ ಚೆನ್ನಾಗಿ ಉಜ್ಜಿರಿ.
 
*ನಿಯಮಿತವಾಗಿ ಪೆಡಿಕ್ಯೂರ್ ಮಾಡಿಸಿಕೊಳ್ಳಿ.
 
* ಮಲಗುವ ಮುನ್ನ ಕಾಲುಗಳಿಗೆ ಮಾಯಿಶ್ಚರೈಸರ್ ಹಚ್ಚಿಕೊಳ್ಳಿ.
 
* ಪ್ರತಿ ನಿತ್ಯ ಪ್ಯೂಮಿಕ್ ಕಲ್ಲಿನ್ನು ಬಳಸಿ ಕಾಲುಗಳನ್ನು ಉಜ್ಜಿ, ಹೀಗೆ ಮಾಡುವುದರಿಂದ ಕಾಲಿನ ಹಿಮ್ಮಡಿಯ ಡೆಡ್ ಸ್ಕಿನ್ ಸೆಲ್ಸ್‌ಗಳು ನಾಶವಾಗಿ ಪಾದಗಳು ನುಣುಪಾಗಿ ಕಂಗೊಳಿಸುತ್ತವೆ.
 
* ನಿಮ್ಮ ಪಾದಗಳನ್ನು ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳಿ.
 
* ಗ್ಲಿಸರಿನ್ ಮತ್ತು ರೋಸ್ ವಾಟರ್ ಅನ್ನು ಮಿಶ್ರಣ ಮಾಡಿ 15 ದಿನಗಳ ಕಾಲ ಕಾಲುಗಳಿಗೆ ಹಚ್ಚಿಕೊಳ್ಳಿ.
 
* ಪ್ರತಿ ದಿನ ರಾತ್ರಿ ಮಲಗುವ ಮೊದಲು ಪಾದಗಳಿಗೆ ಎಳ್ಳೆಣ್ಣೆ ಹಚ್ಚಿಕೊಳ್ಳಿ, ಇದು ಕಾಲುಗಳ ಸೌಂದರ್ಯ ಇಮ್ಮಡಿಗೊಳಿಸುತ್ತದೆ.
 
* ಪ್ರತಿ ದಿನ ರಾತ್ರಿ ಮಲಗುವ ಮೊದಲು ಆಲೋವೆರ ಜೆಲ್‌ನಿಂದ ಪಾದವನ್ನು ಮಸಾಜ್ ಮಾಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ವಾದಿಷ್ಠವಾದ ಫ್ರುಟ್ ಕುಕೀಸ್