Select Your Language

Notifications

webdunia
webdunia
webdunia
webdunia

ಈ ಎಂಟು ಜಾಗಗಳಿಗೆ ಹೋಗುವಾಗ ಬರಿಗೈಯಲ್ಲಿ ಹೋಗಬಾರದು!

ಈ ಎಂಟು ಜಾಗಗಳಿಗೆ ಹೋಗುವಾಗ ಬರಿಗೈಯಲ್ಲಿ ಹೋಗಬಾರದು!
ಬೆಂಗಳೂರು , ಮಂಗಳವಾರ, 23 ಆಗಸ್ಟ್ 2022 (08:20 IST)
ಬೆಂಗಳೂರು: ಸಾಮಾನ್ಯವಾಗಿ ದೇವಾಲಯಕ್ಕೆ ಅಥವಾ ನೆಂಟರ ಮನೆಗೆ ಹೋಗುವಾಗ ಬರಿಗೈಯಲ್ಲಿ ಹೋಗಬಾರದು ಎನ್ನುತ್ತಾರೆ. ಹೀಗೇ ನಮ್ಮ ಧಾರ್ಮಿಕ ಶ್ರದ್ಧೆಯ ಪ್ರಕಾರ ಎಂಟು ಸ್ಥಳಗಳಿಗೆ ನಾವು ಬರಿಗೈಯಲ್ಲಿ ಹೋಗಬಾರದು. ಅವುಗಳು ಯಾವುವು ನೋಡೋಣ.

ವೇದಸಂಪನ್ನರ ಮನೆಗೆ: ವೇದಾಧ‍್ಯಯನ ಸಂಪನ್ನರ ಮನೆಗೆ ಹೋಗುವಾಗ ಹೂವು, ಹಣ್ಣುಗಳನ್ನು ತೆಗೆದುಕೊಂಡು ಹೋಗಬೇಕು.
ಗರ್ಭಿಣಿ ಸ್ತ್ರೀಯರನ್ನು ನೋಡಲು ಹೋಗುವಾಗ: ಹೊಟ್ಟೆಯೊಳಗೆ ಇನ್ನೊಂದು ಜೀವವಿಟ್ಟುಕೊಂಡಿರುವ ಗರ್ಭಿಣಿಯರು ಮಹಾತಾಯಿ ಎಂದೇ ಪರಿಗಣಿತರಾಗಿರುತ್ತಾರೆ. ಅವರನ್ನು ನೋಡಲು ಹೋಗುವಾಗ ಅವರ ಇಷ್ಟವಸ್ತುಗಳನ್ನು ಕೇಳಿ ತಿಳಿದು ತೆಗೆದುಕೊಂಡು ಹೋಗಬೇಕು.
ತೀರ್ಥಕ್ಷೇತ್ರಗಳಿಗೆ: ದೇವಾಲಯಗಳಿಗೆ ಮಾತ್ರವಲ್ಲ, ತೀರ್ಥ ಯಾತ್ರೆಗಳಿಗೆ ತೆರಳುವಾಗ ಪುಣ್ಯ ಕ್ಷೇತ್ರಗಳಿಗೂ ಬರಿಗೈಯಲ್ಲಿ ಹೋಗುವಂತಿಲ್ಲ.
ವೃದ್ಧರನ್ನು ನೋಡಲು ಹೋಗುವಾಗ: ವೃದ್ಧರು ಮಕ್ಕಳ ಸಮಾನ. ಅವರನ್ನು ನೋಡಲು ಹೋಗುವಾಗಲೂ ಬರಿಗೈಯಲ್ಲಿ ಹೋಗಬಾರದು.
ಮಕ್ಕಳನ್ನು ನೋಡಲು ಹೋಗುವಾಗ: ಚಿಕ್ಕಮಕ್ಕಳು ಮನೆಗೆ ಯಾರೇ ಬಂದರೂ ನಮ್ಮ ಕೈಯಲ್ಲಿ ಏನಿದೆ ಎಂದೇ ನೋಡುತ್ತಾರೆ. ಹೀಗಾಗಿ ಅವರನ್ನೂ ನಿರಾಶೆಗೊಳಿಸಬಾರದು.
ರಾಜರನ್ನು ನೋಡುವಾಗ: ನಮ್ಮ ಪ್ರಭುವಿನ ಸಮಾನರನ್ನು ನೋಡಲು ಹೋಗುವಾಗ ಏನಾದರೂ ಕಾಣಿಕೆ ನೀಡಬೇಕು.
ದೇವರ ದರ್ಶನ: ದೇವಾಲಯಕ್ಕೆ ದೇವರ ದರ್ಶನಕ್ಕೆ ಹೋಗುವಾಗ ಹೂವು, ಹಣ್ಣು, ದೀಪದ ಎಣ್ಣೆ ಅಥವಾ ಇನ್ಯಾವುದೇ ವಸ್ತುವನ್ನು ಕೊಂಡೊಯ್ಯುವುದು ಶ್ರೇಷ್ಠ.
ಗುರು ದರ್ಶನ: ಗುರುಗಳೂ ದೇವರ ಸಮಾನ. ಅವರಿಗೂ ಫಲ ವಸ್ತುಗಳನ್ನು ನೀಡುವುದು ಉತ್ತಮ ಸಂಸ್ಕಾರ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ