Select Your Language

Notifications

webdunia
webdunia
webdunia
webdunia

ಭಗವಾನ್ ಕೃಷ್ಣನ ಕುರಿತು ವಿಶೇಷ ಮಾಹಿತಿ

ಭಗವಾನ್ ಕೃಷ್ಣನ ಕುರಿತು ವಿಶೇಷ ಮಾಹಿತಿ
ಬೆಂಗಳೂರು , ಶುಕ್ರವಾರ, 19 ಆಗಸ್ಟ್ 2022 (10:40 IST)
: ಚಿಕ್ಕವರಿಂದ ಹಿಡಿದು ಎಲ್ಲಾ ವರ್ಗದವರು ಅತ್ಯಂತ ಇಷ್ಟಪಟ್ಟು ಆರಾಧಿಸುವ ಭಗವಾನ್ ಶ್ರೀಕೃಷ್ಣನ ಜನ್ಮಜಯಂತಿ ಪ್ರಯುಕ್ತ ವಿಶೇಷ ಮಾಹಿತಿ ಇಲ್ಲಿದೆ ನೋಡಿ.

ಶ್ರಿಕೃಷ್ಣ ಹುಟ್ಟಿದ್ದು ಇಂದಿಗೆ 5253 ವರ್ಷಗಳ ಹಿಂದೆ. ಅವನ ಜನ್ಮ ದಿನಾಂಕ ಜುಲೈ 19 ಕ್ರಿ.ಪೂ. 3228. ಶ್ರಾವಣ ತಿಂಗಳು, ಅಷ್ಟಮಿ ದಿನ, ರೋಹಿಣಿ ನಕ್ಷತ್ರ, ಬುಧವಾರದಂದು ಮಧ್ಯರಾತ್ರಿ 12.00 ಗಂಟೆಗೆ ಶ್ರೀಕೃಷ್ಣನ ಜನನವಾಯಿತು.

ಅವನು ಒಟ್ಟು 126 ವರ್ಷ 8 ತಿಂಗಳು 7 ದಿನಗಳ ಕಾಲ ಬದುಕಿದ್ದ. ಮರಣ ಹೊಂದಿದ್ದು ಫೆಬ್ರವರಿ 18, ಕ್ರಿ.ಪೂ. 3102 ರಂದು. ಶ್ರೀಕೃಷ್ಣನಿಗೆ 89 ವರ್ಷವಾದಾಗ ಮಹಾಭಾರತ ಯುದ್ಧ ನಡೆಯಿತು. ಬಳಿಕ 36 ವರ್ಷಗಳ ಕಾಲ ಅವನು ಬದುಕಿದ್ದ. ಕೃಷ್ಣ ತನ್ನ ಜೀವಿತಾವಧಿಯಲ್ಲಿ ಕೇವಲ 4 ಜನರನ್ನು ಮಾತ್ರ ಕೊಂದಿದ್ದ.  ಜಾರಾ ಎನ್ನುವ ಬೇಟೆಗಾರನಿಂದ ಅವನ ಮರಣವಾಗುತ್ತದೆ. ಜೀವನದಲ್ಲಿ ಏನೇ ಬಂದರೂ ನಗು ನಗುತ್ತಾ ಶಾಂತ ಚಿತ್ತದಿಂದ ಎದುರಿಸಬೇಕೆಂದು ನಮಗೆ ಪಾಠ ಹೇಳಿಕೊಟ್ಟಿದ್ದೇ ಶ್ರೀಕೃಷ್ಣ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ