ಹೈದರಾಬಾದ್: ರೆಬಲ್ ಸ್ಟಾರ್ ಪ್ರಭಾಸ್ ಮದುವೆಯಾಗದಿರಲು ಏನು ಕಾರಣ? ಅವರ ತಾಯಿ ಬಿಚ್ಚಿಟ್ಟಿದ್ದಾರೆ ನಿಜ ರಹಸ್ಯ.
ಪ್ರಭಾಸ್ ಮದುವೆ ಬಗ್ಗೆ ಇತ್ತೀಚೆಗೆ ಭಾರೀ ಚರ್ಚೆಯಾಗುತ್ತಿದೆ. ಜ್ಯೋತಿಷಿಯೊಬ್ಬರಂತೂ ಪ್ರಭಾಸ್ ಮದುವೆಯಾದರೆ ಗಂಡಾಂತರವಿದೆ ಎಂದು ಶಾಕ್ ನೀಡಿದ್ದರು.
ಇತ್ತೀಚೆಗೆ ಅವರ ತಾಯಿ ಶಿವ ಕುಮಾರಿ ಮಗನ ಮದುವೆ ಬಗ್ಗೆ ಮಾತನಾಡಿದ್ದಾರೆ. ಪ್ರಭಾಸ್ ಗೆ ರವಿ ಎಂಬ ಸ್ನೇಹಿತನಿದ್ದಾನೆ. ಆತನ ಪ್ರೇಮ ಸಂಬಂಧ ವಿಫಲವಾಗಿ ಆತ ತೀರಾ ಕುಗ್ಗಿಹೋಗಿದ್ದ. ಆತನನ್ನು ನೋಡಿ ಪ್ರಭಾಸ್ ಗೆ ಮದುವೆಯ ಮೇಲೆ ಆಸಕ್ತಿಯೇ ಹೊರಟು ಹೋಗಿತ್ತು ಎಂದಿದ್ದಾರೆ. ಹೀಗಾಗಿಯೇ ಪ್ರಭಾಸ್ ಇನ್ನೂ ಮದುವೆ ಮಾಡುವ ಮನಸ್ಸು ಮಾಡಿಲ್ಲವಂತೆ.