Webdunia - Bharat's app for daily news and videos

Install App

ಯಾವ ರಾಶಿಯವರು ವೈದ್ಯ ವೃತ್ತಿಯಲ್ಲಿ ಯಶಸ್ವಿಯಾಗುತ್ತಾರೆ ತಿಳಿಯಿರಿ

Krishnaveni K
ಮಂಗಳವಾರ, 13 ಫೆಬ್ರವರಿ 2024 (08:36 IST)
File photo
ಬೆಂಗಳೂರು: ಮಕ್ಕಳು ಹುಟ್ಟಿದ ತಕ್ಷಣ ತಂದೆ-ತಾಯಿ ಅವರ ಬಗ್ಗೆ ದೊಡ್ಡ ದೊಡ್ಡ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. ಜ್ಯೋತಿಷ್ಯದ ಪ್ರಕಾರ ಎಲ್ಲಾ ರಾಶಿಯವರಿಗೆ ವೈದ್ಯರಾಗಲು ಸಾಧ‍್ಯವಿಲ್ಲ. ಕೆಲವು ರಾಶಿಯವರಿಗೆ ವೈದ್ಯ ವೃತ್ತಿಯಲ್ಲಿ ಚಾಕಚಕ್ಯತೆ ಇರುತ್ತದೆ. ವೈದ್ಯ ವೃತ್ತಿಯಲ್ಲಿ ಯಶಸ್ಸು ಕಾಣಬಹುದಾದ ರಾಶಿ ಯಾವುದೆಲ್ಲಾ ನೋಡೋಣ.

ಕನ್ಯಾ ರಾಶಿ: ಕನ್ಯಾ ರಾಶಿಯವರು ಯಾವುದೇ ವಿಚಾರವನ್ನು ವಿಮರ್ಶಾತ್ಮಕವಾಗಿ ನೋಡುತ್ತಾರೆ. ಹೀಗಾಗಿ ವೈದ್ಯಕೀಯ ವೃತ್ತಿಯ ಎಲ್ಲಾ ಸವಾಲುಗಳನ್ನೂ ಮೆಟ್ಟಿನಿಲ್ಲುವ ಗುಣ ಇವರಲ್ಲಿರುತ್ತದೆ.
ಕರ್ಕಟಕ: ಕರ್ಕಟಕ ರಾಶಿಯವರು ಭಾವನಾತ್ಮಕರು ಹಾಗೂ ಬುದ್ಧಿವಂತರು. ಇನ್ನೊಬ್ಬರ ಸೇವೆ ಮಾಡುವ ಗುಣ ಇವರಲ್ಲಿ ನೈಸರ್ಗಿಕವಾಗಿರುತ್ತದೆ. ಹೀಗಾಗಿ ವೈದ್ಯ ವೃತ್ತಿ ಇವರಿಗೆ ಹೇಳಿ ಮಾಡಿಸಿದಂತದ್ದು.
ಮೀನ ರಾಶಿ: ಮೀನ ರಾಶಿಯವರು ಇನ್ನೊಬ್ಬರೊಂದಿಗೆ ಆತ್ಮೀಯವಾಗಿ, ಆಪ್ಯಾಯಮಾನವಾಗಿ ನಡೆದುಕೊಳ್ಳುವ ಗುಣ ಹೊಂದಿರುತ್ತಾರೆ. ವೈದ್ಯ ವೃತ್ತಿಯಲ್ಲಿರುವವರಿಗೆ ಈ ಗುಣಗಳು ಅಗತ್ಯ. ಈ ರಾಶಿಯ ವೈದ್ಯರು ತಮ್ಮ ರೋಗಿಗಳ ಅಗತ್ಯಗಳನ್ನು ಅರಿತು ಸೇವೆ ಮಾಡುತ್ತಾರೆ.
ವೃಶ್ಚಿಕ: ಯಾವುದೇ ವಿಚಾರವನ್ನು ಆಳವಾಗಿ ಅಧ್ಯಯನ ಮಾಡುವ ಇವರ ಗುಣ ವೈದ್ಯಕೀಯ ಓದಿಗೆ ಅಗತ್ಯವಾಗಿ ಬೇಕಾಗುತ್ತದೆ. ಯಾವುದೇ ಒತ್ತಡವನ್ನು ನಿಭಾಯಿಸಬಲ್ಲ ಚಾಕಚಕ್ಯತೆ ಇವರಲ್ಲಿರುತ್ತದೆ. ಹೀಗಾಗಿ ಈ ವೃತ್ತಿ ಇವರಿಗೆ ಹೇಳಿ ಮಾಡಿಸಿದಂತದ್ದು.
ಮಕರ: ಜವಾಬ್ಧಾರಿ, ಶಿಸ್ತು ಬದ್ಧತೆ ಮತ್ತು ಯಾವುದೇ ಒಂದು ವಿಚಾರದ ಬಗ್ಗೆ ಬದ್ಧರಾಗಿರುವುದು ಈ ರಾಶಿಯವರ ಗುಣ ಸ್ವಭಾವಗಳು. ಇದು ವೈದ್ಯರಿಗೆ ಬೇಕಾದ ಅಗತ್ಯ ಗುಣಗಳು. ಹೀಗಾಗಿ ಈ ರಾಶಿಯವರು ವೈದ್ಯರಾಗಿ ಯಶಸ್ಸು ಸಾಧಿಸಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಂಗಳವಾರ ಈ ವಸ್ತುಗಳನ್ನು ಮನೆಗೆ ತರಬಾರದು

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಸೋಮವಾರ ನಂದಿಯ ಈ ಮಂತ್ರ ಹೇಳಿದರೆ ಬುದ್ಧಿ ಶಕ್ತಿ ಚುರುಕಾಗುತ್ತದೆ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ವಿಜಯದಶಮಿ ಎಷ್ಟು ಹೊತ್ತಿಗೆ ಆಚರಿಸಬೇಕು, ಮುಹೂರ್ತ ಯಾವಾಗ

ಮುಂದಿನ ಸುದ್ದಿ
Show comments