Publish Date: Sat, 22 Jun 2019 (08:45 IST)
Updated Date: Sat, 22 Jun 2019 (08:47 IST)
ಬೆಂಗಳೂರು: ಶನಿ ದೆಸೆ ಎಂದರೆ ಎಲ್ಲರೂ ಕಷ್ಟದ ಸಮಯ ಎಂದೇ ಭಯಭೀತರಾಗುತ್ತಾರೆ. ಆದ್ದರಿಂದ ಜನ್ಮಸ್ಯ ಶನಿ, ಚತುರ್ಥ ಶನಿ, ಸಪ್ತಮ ಶನಿ ಅಥವಾ ಅಷ್ಟಮ ಶನಿ ದೋಷವಿದ್ದಾಗ ಯಾವ ಪೂಜೆ ಮಾಡಿದರೆ ಒಳಿತು ನೋಡೋಣ.
ಈ ರೀತಿಯ ಶನಿ ದೋಷ ಬಂದಾಗ ಲಕ್ಷ್ಮೀ ನರಸಿಂಹ ಸ್ವಾಮಿಗೆ ಜೇನುತುಪ್ಪದ ಅಭಿಷೇಕ, ಪಂಚಾಮೃತ ಅಭಿಷೇಕ, ವಸ್ತ್ರದಾನ, ಹೂವಿನ ಅಲಂಕಾರ, ಲಕ್ಷ್ಮೀನಾರಸಿಂಹ ಸಹಸ್ರನಾಮ ಪಾರಾಯಣ ಮಾಡಬೇಕು.
ಆಂಜನೇಯ ಸ್ವಾಮಿಗೆ ವೀಳ್ಯದೆಲೆ, ಕುಂಕುಮ ಅಲಂಕಾರ, ಪವನಸೂಕ್ತ ಅಭಿಷೇಕ, ವಾಯುಸ್ತುತಿ ಪಾರಾಯಣ, ತೀರಾ ಆರೋಗ್ಯ ಸಮಸ್ಯೆ ಬಂದರೆ ಆಂಜನೇಯ ಸ್ವಾಮಿಗೆ ಬೆಣ್ಣೆಯ ಅಲಂಕಾರ ಮಾಡಬಹುದು.