Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಶನಿವಾರ, 22 ಜೂನ್ 2019 (08:39 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಸಾಂಸಾರಿಕವಾಗಿ ಬಿಡುವಿಲ್ಲದೇ ಕೆಲಸಗಳಿರಲಿವೆ. ಆದರೆ ಸಂಗಾತಿಯಿಂದ ಸಹಕಾರ ಸಿಗುವುದು. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕೆಲಸಗಳಿಗೆ ಹಲವು ಅಡೆತಡೆಗಳು ತೋರಿಬರಲಿವೆ. ದೇವತಾ ಪ್ರಾರ್ಥನೆ ಮಾಡಿ.

ವೃಷಭ: ಆರ್ಥಿಕವಾಗಿ ಇದುವರೆಗೆ ಇದ್ದ ಅಡಚಣೆಗಳು ನಿವಾರಣೆಯಾಗಿ ಅಂದುಕೊಂಡ ಕೆಲಸಗಳನ್ನು ನೆರವೇರಿಸಲಿದ್ದೀರಿ. ಸಾಲಗಾರರಿಂದ ಮುಕ್ತಿ ಸಿಗಲಿದೆ. ನಿಮ್ಮ ಕೆಲಸಕ್ಕೆ ದೇವರ ಅನುಗ್ರಹವಿರಲಿದೆ.

ಮಿಥುನ: ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳೊಂದಿಗೆ ಹೊಂದಾಣಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ವ್ಯಾಪಾರಿಗಳು ವಂಚನೆಗೊಳಗಾಗದಂತೆ ಎಚ್ಚರಿಕೆ ವಹಿಸಬೇಕು.

ಕರ್ಕಟಕ: ವ್ಯಾಪಾರ ವಹಿವಾಟಿನಲ್ಲಿ ಲಾಭ ಗಳಿಸುವಿರಿ. ಆದರೆ ಮೈಮೇಲೆ ಎಚ್ಚರಿಕೆ ಕಳೆದುಕೊಂಡು ಕೆಲಸ ಮಾಡಿದರೆ ಅಪಾಯ ತಪ್ಪಿದ್ದಲ್ಲ. ಸಾಂಸಾರಿಕವಾಗಿ ಸಂಗಾತಿಯೊಂದಿಗೆ ಮನಸ್ತಾಪವಾಗಲಿದೆ. ತಾಳ್ಮೆಯಿರಲಿ.

ಸಿಂಹ: ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ಪ್ರೇಮಿಗಳಿಗೆ ಮನೆಯವರಿಂದ ವಿರೋಧ ವ್ಯಕ್ತವಾಗಬಹುದು. ಹಿತಶತ್ರುಗಳಿಂದ ವಂಚನೆಗೊಳಗಾದಂತೆ ಎಚ್ಚರಿಕೆ ವಹಿಸಬೇಕು. ಕಷ್ಟದ ಸಮಯದಲ್ಲಿ ಮಿತ್ರರಿಂದ ಸಹಾಯ ಸಿಗುವುದು.

 
ಕನ್ಯಾ: ವೃತ್ತಿ ರಂಗದಲ್ಲಿ ಬಿಡುವಿಲ್ಲದೇ ದುಡಿದು ದೇಹ ಹೈರಾಣಾಗುವುದು. ಸಾಂಸಾರಿಕವಾಗಿ ಮಕ್ಕಳ ವಿಚಾರದಲ್ಲಿ ಮನಸ್ಸಿಗೆ ಚಿಂತೆಯಾಗುವುದು. ದೇಹಾರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ಖರ್ಚು ವೆಚ್ಚಗಳ ಬಗ್ಗೆ ಮಿತಿಯಿರಲಿ.

ತುಲಾ: ನೀವು ಕಷ್ಟಪಟ್ಟಿದ್ದಕ್ಕೆ ತಕ್ಕ ಪ್ರತಿಫಲ ಖಂಡಿತಾ ಪಡೆಯುವಿರಿ. ಆರಂಭದಲ್ಲಿ ಕೊಂಚ ವಿಘ್ನಗಳು ಎದುರಾದರೂ ಅಂತಿಮ ಜಯ ನಿಮ್ಮದೇ ದಾಯಾದಿಗಳೊಂದಿಗೆ ಮನಸ್ತಾಪಗಳು ದೂರವಾಗಲಿದೆ.

ವೃಶ್ಚಿಕ: ವಿವಾಹ ಬೇಡವೆಂದು ಕೂತಿದ್ದವರಿಗೆ ಅನಿರೀಕ್ಷಿತವಾಗಿ ಕಂಕಣ ಭಾಗ್ಯ ಒದಗಿಬರಲಿದೆ. ಆದರೆ ಅನವಶ್ಯಕ ವಿವಾದಗಳಿಂದ ದೂರಿವಿರಿ. ದೂರ ಪ್ರಯಾಣ ಮಾಡುವ ಸಾಧ್ಯತೆಯಿದ್ದು, ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.

ಧನು: ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಖರ್ಚು ವೆಚ್ಚಗಳು ಅಧಿಕವಾದೀತು. ಆದರೆ ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ಸರ್ಕಾರಿ ಕೆಲಸಗಳಲ್ಲಿ ಜಯ ಸಿಗುವುದು. ಪ್ರೀತಿ ಪಾತ್ರರೊಂದಿಗೆ ಅಮೂಲ್ಯ ಸಮಯ ಕಳೆಯುವಿರಿ.

ಮಕರ: ಆರ್ಥಿಕವಾಗಿ ನಿಧಾನವಾಗಿ ಚೇತರಿಕೆ ಕಂಡುಬಂದು ಮನೋಕಾಮನೆಗಳನ್ನು ಪೂರೈಸುವಿರಿ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ. ಸ್ವ ಉದ್ಯಮಿಗಳಿಗೆ ಕೊಂಚ ನಷ್ಟವಾದೀತು. ಸಂಗಾತಿಯ ಸಲಹೆಗಳಿಗೆ ಕಿವಿಗೊಡಿ.

ಕುಂಭ: ಕಷ್ಟಗಳು ಬಂದಾಗ ಯಾರೂ ಸಹಾಯ ಮಾಡುತ್ತಿಲ್ಲ ಎಂದು ಕೊರಗುವಿರಿ. ಆತ್ಮಸ್ಥೈರ್ಯದಿಂದ ಎದುರಿಸಿ. ಉದ್ಯೋಗ ಕ್ಷೇತ್ರದಲ್ಲಿ ಎಲ್ಲವೂ ನೀವಂದುಕೊಂಡಂತೆ ನಡೆಯಲಿದೆ. ದೇವತಾ ಪ್ರಾರ್ಥನೆ ಮಾಡಿ.

ಮೀನ: ನಿರುದ್ಯೋಗಿಗಳು ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಸ್ವೀಕರಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ. ಮೇಲ್ವರ್ಗದ ನೌಕರರಿಗೆ ಉದ್ಯೋಗದಲ್ಲಿ ಬಡ್ತಿ ಯೋಗವಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಲಶಕ್ಕೆ ತಾಮ್ರದ ಪಾತ್ರವನ್ನೇ ಬಳಸುವುದು ಯಾಕೆ?