ಮೇಷ ರಾಶಿಯವರಿಗೆ ಯಾವ ಬಣ್ಣ, ಸಂಖ್ಯೆ ಅದೃಷ್ಟಶಾಲಿ?

Krishnaveni K
ಸೋಮವಾರ, 5 ಫೆಬ್ರವರಿ 2024 (08:33 IST)
ಬೆಂಗಳೂರು: ಮೇಷ ರಾಶಿಯವರು ಸ್ವಭಾವತಃ ಸ್ವಾಭಿಮಾನಿಗಳು, ನಾಯಕತ್ವದ ಗುಣವಿರುವವರೂ ಆಗಿರುತ್ತಾರೆ. ಈ ರಾಶಿಯವರಿಗೆ ಅದೃಷ್ಟ ತರುವ ಸಂಖ್ಯೆ ಮತ್ತು ಬಣ್ಣ ಯಾವುದು ನೋಡೋಣ.

ಮೇಷ ರಾಶಿಯವರ ಗುಣ ಸ್ವಭಾವಗಳು
ಮೇಷ ರಾಶಿಯವರ ಬಲ ಎಂದರೆ ಅವರಲ್ಲಿ ಎಲ್ಲರನ್ನೂ ಆಳುವ ಗುಣವಿರುತ್ತದೆ. ಅಷ್ಟು ಬೇಗ ಸೋಲೊಪ್ಪಿಕೊಳ್ಳುವವರಲ್ಲ. ಆದರೆ ತಮ್ಮನ್ನು ಪ್ರೀತಿಸುವವರನ್ನು ಅಷ್ಟೇ ವಿಧೇಯರಾಗಿ ಪ್ರೀತಿಸುವ ಭಾವುಕ ವ್ಯಕ್ತಿಗಳು. ಈ ರಾಶಿಯವರು ಕೆಲಸ ಕಾರ್ಯಗಳಲ್ಲಿ ನಿಷ್ಠರಾಗಿರುತ್ತಾರೆ. ಇನ್ನೊಬ್ಬರಿಗೆ ಭದ್ರತೆಯ ಭಾವ ನೀಡುವ ವ್ಯಕ್ತಿತ್ವದವರಾಗಿರುತ್ತಾರೆ.

ಮೇಷ ರಾಶಿಯ ಅದೃಷ್ಟ ಸಂಖ್ಯೆ, ಬಣ್ಣ
 ಮೇಷ ರಾಶಿವಯರಿಗೆ ಅದೃಷ್ಟದ ಸಂಖ್ಯೆ ಎಂದರೆ 9 ಅಥವಾ 6. ಈ ಎರಡು ಸಂಖ್ಯೆ ಈ ರಾಶಿಯವರಿಗೆ ಅದೃಷ್ಟ ತರುತ್ತದೆ. ಜೊತೆಗೆ 7 ಕೂಡಾ ಶುಭದಾಯಕವಾಗಿರುತ್ತದೆ. ನಿರ್ಧಾರ ತೆಗೆದುಕೊಳ್ಳುವಾಗ ಗೊಂದಲ ಕಾಡಿದರೆ 9 ಸಂಖ್ಯೆಯನ್ನು ಆಯ್ಕೆ ಮಾಡಿ. ಕೆಲಸದ ವಿಚಾರದಲ್ಲಿ ವಿಘ್ನಗಳಿದ್ದಾಗ 6 ಸಂಖ್ಯೆಯನ್ನು ಬಳಸಿದರೆ ಅದೃಷ್ಟ ಬರುತ್ತದೆ.

ಈ ರಾಶಿಯವರಿಗೆ ಕೆಂಪು ಬಣ್ಣ ಅತೀ ಅದೃಷ್ಟದ್ದಾಗಿದೆ. ಇದು ಈ ರಾಶಿಯವರ ಮುನ್ನಗ್ಗುವ, ನಾಯಕತ್ವದ, ಆಕ್ರಮಣಕಾರೀ ಸ್ವಭಾವಕ್ಕೆ ತಕ್ಕಂತಹ ಬಣ್ಣವಾಗಿದೆ. ಅದರ ಹೊರತಾಗಿ ಹಳದಿ ಮತ್ತು ಬಿಳಿ ಬಣ್ಣವೂ ಈ ರಾಶಿಯವರಿಗೆ ಅದೃಷ್ಟ ತಂದುಕೊಡಬಲ್ಲದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಂಗಳಗೌರಿ ಅಷ್ಟೋತ್ತರ ಶತನಾಮಾವಳಿ ಸ್ತೋತ್ರ

ಸೋಮವಾರ ಶಿವ ಪಂಚಾಕ್ಷರಿ ಸ್ತೋತ್ರ ಪಠಿಸಿ

ಶನಿ ಅಮಾವಾಸ್ಯೆ: ಮಹತ್ವ, ಆಚರಣೆ ಮತ್ತು ಶನಿದೇವನ ಕೃಪೆಗೆ ಸರಳ ಪರಿಹಾರಗಳು

ವಿವಾಹಾದಿ, ಸಂತಾನ ಸಮಸ್ಯೆಗಳ ನಿವಾರಣೆಗೆ ಓದಬೇಕಾದ ಸುಬ್ರಹ್ಮಣ್ಯ ಸ್ತೋತ್ರ

ಕಲ್ಯಾಣವೃಷ್ಟಿಸ್ತವ ಸ್ತೋತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments