Select Your Language

Notifications

webdunia
webdunia
webdunia
webdunia

ವಿದ್ಯಾಭ್ಯಾಸದಲ್ಲಿ ಪ್ರಗತಿಗೆ ವಾಸ್ತು ಪ್ರಕಾರ ಈ ಟಿಪ್ಸ್ ಪಾಲಿಸಿ

Astrology

Krishnaveni K

ಬೆಂಗಳೂರು , ಶನಿವಾರ, 27 ಜನವರಿ 2024 (08:21 IST)
File photo
ಬೆಂಗಳೂರು: ಎಷ್ಟೇ ಓದಿದರೂ ವಿದ್ಯೆ ತಲೆಗೆ ಹತ್ತುತ್ತಿಲ್ಲ, ಅಂದುಕೊಂಡಷ್ಟು ಮಾರ್ಕ್ಸ್ ಬರುತ್ತಿಲ್ಲ ಎಂದು ಚಿಂತೆ ಮಾಡುವವರು ಈ ವಾಸ್ತು ಟಿಪ್ಸ್ ಫಾಲೋ ಮಾಡಿದರೆ ಉತ್ತಮ.

ನಾವು ಎಷ್ಟೇ ಏಕಾಗ್ರತೆಯಿಂದ ಓದಿ ಎಲ್ಲಾ ಮನನ ಮಾಡಿಕೊಂಡಿದ್ದೇವೆ ಎಂದರೂ ಕೆಲವೊಮ್ಮೆ ಪರೀಕ್ಷೆ ಸಮಯದಲ್ಲಿ ಎಡವಿ ಬೀಳುತ್ತೇವೆ. ಹೀಗಾಗಿ ವಿದ್ಯೆಗೆ ತಲೆಗೆ ಹತ್ತಬೇಕಾದರೆ ಸ್ವ ಪ್ರಯತ್ನದ ಜೊತೆಗೆ ದೇವರ ಅನುಗ್ರಹವೂ ಬೇಕು. ನೀವು ಓದುವ ಕೊಠಡಿ, ಮೇಜು, ಓದಲು ಕೂರುವ ದಿಕ್ಕು ನಿಮಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ, ಯಶಸ್ಸು ತಂದುಕೊಡಲು ಕಾರಣವಾಗುತ್ತದೆ.

ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಆಗದೇ ಇರಲು ಓದುವ ಮೇಜು, ಕುರ್ಚಿಯನ್ನು ಮನೆಯ ಪೂರ್ವ ಅಥವಾ ಉತ್ತರ ದಿಕ್ಕಿಗೆ ಇಡಿ. ಯಾವಾಗಲೂ ಓದುವ ಮೇಜು ಗೋಡೆಗೆ ತಾಕದಂತೆ ಇಡಿ. ಗೋಡೆ ಮತ್ತು ನಿಮ್ಮ ಮೇಜಿನ ನಡುವೆ ಕೊಂಚ ಅಂತರವಿಟ್ಟು ಇಟ್ಟುಕೊಳ್ಳಿ.

ಓದುವ ಕೋಣೆ ಎಲ್ಲಿರಬೇಕು ಎಂಬುದೂ ನಿಮ್ಮ ಯಶಸ್ಸನ್ನು ನಿರ್ಧರಿಸುತ್ತದೆ. ಮನೆಯ ಯಾವುದೋ ಒಂದು ಮೂಲೆಯಲ್ಲಿ ಕುಳಿತು ಓದಿದರಾಯಿತು ಎಂಬ ಉಡಾಫೆ ಬೇಡ. ನೀವು ಓದುವ ಕೋಣೆ ಯಾವತ್ತೂ ಸ್ನಾನದ ಮನೆಯ ಕೆಳಭಾಗದಲ್ಲಿ ಅದಕ್ಕೆ ತಾಕಿದಂತೆ ಇರಬಾರದು.

ಪುಸ್ತಕ ಇಡುವ ಕಪಾಟನ್ನು ಪೂರ್ವ, ಉತ್ತರ ಅಥವಾ ಈಶಾನ್ಯ ಭಾಗದಲ್ಲಿರುವಂತೆ ನೋಡಿಕೊಳ್ಳಿ. ಪುಸ್ತಕ ಕನ್ನಡಿಯಲ್ಲಿ ಪ್ರತಿಬಿಂಬಿಸದಂತೆ ನೋಡಿಕೊಳ್ಳುವುದು ಮುಖ್ಯ. ಇದು ನೆಗೆಟಿವ್ ಎನರ್ಜಿ ಉಂಟಾಗಲು ಕಾರಣವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಚೆನ್ನಾಗಿ ಗಾಳಿ, ಬೆಳಕು ಇರುವ ಕೊಠಡಿಯಲ್ಲಿ ಓದಲು ಕುಳಿತುಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?