ಬೆಂಗಳೂರು: ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಮುಂದೆ ಬರಲು ಏಕಾಗ್ರತೆ ಜೊತೆಗೆ ಅವರು ಯಾವ ದಿಕ್ಕಿಗೆ ಕೂತು ಓದುತ್ತಾರೆ, ಅವರ ಪುಸ್ತಕ, ಟೇಬಲ್ ಇತ್ಯಾದಿಗಳ ವಾಸ್ತು ಕೂಡಾ ಮುಖ್ಯವಾಗುತ್ತದೆ.
ಓದುವಾಗ ಏಕಾಗ್ರತೆ ಹೆಚ್ಚಬೇಕಾದರೆ ಉತ್ತರ ಅಥವಾ ಪೂರ್ವ ದಿಕ್ಕಿಗೆ ಕೂತು ಓದಿ. ಅದೇ ರೀತಿ ಟೇಬಲ್ ಮತ್ತು ಗೋಡೆಯ ನಡುವೆ ಸಣ್ಣ ಅಂತರವಿರಲಿ. ಓದುವ ಕೋಣೆ ಬಾತ್ ರೂಂ ಅಥವಾ ಮನೆಯ ಬೀಮ್ ನ ಕೆಳಗೆ ಇರದಂತೆ ನೋಡಿಕೊಳ್ಳಿ. ಪುಸ್ತಕ ಇಡುವ ಜಾಗ ಪೂರ್ವ ದಿಕ್ಕಿನಲ್ಲಿದ್ದರೆ ಉತ್ತಮ. ನೈಋತ್ಯ ದಿಕ್ಕಿನಲ್ಲಿ ದೀಪ ಉರಿಸಿಕೊಂಡು ಓದಿದರೆ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬಹುದು.