Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಭಾನುವಾರ 9 ಗಂಟೆಗೆ 9 ನಿಮಿಷ ದೀಪ ಬೆಳಗುವುದರ ಹಿಂದಿನ ಜ್ಯೋತಿಷ್ಯ ರಹಸ್ಯವೇನು ಗೊತ್ತಾ?

webdunia
ಶನಿವಾರ, 4 ಏಪ್ರಿಲ್ 2020 (09:36 IST)
ನವದೆಹಲಿ: ಪ್ರಧಾನಿ ಮೋದಿ ಭಾನುವಾರ ಅಂದರೆ ಏಪ್ರಿಲ್ 5 ರಂದು ರಾತ್ರಿ 9 ಗಂಟೆಗೆ 9 ನಿಮಿಷ ಲೈಟ್ ಆಫ್ ಮಾಡಿ ದೀಪ ಬೆಳಗಲು ರಾಷ್ಟ್ರಕ್ಕೆ ಕರೆ ನೀಡಿದ್ದಾರೆ. ಈ ಮೂಲಕ ಕೊರೋನಾ ವಿರುದ್ಧ ಹೋರಾಡಲು ನಾವೆಲ್ಲಾ ಒಗ್ಗಟ್ಟಾಗಿದ್ದೇವೆ ಎಂದು ಸೂಚಿಸೋಣ ಎಂದಿದ್ದಾರೆ.


ಆದರೆ ಪ್ರಧಾನಿ ಈ ರೀತಿ 9 ರ ಸಂಖ್ಯೆಯನ್ನು ವಿಶೇಷವಾಗಿ ಹೇಳಲು ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷ ಕಾರಣವಿದೆ. ಭಾನುವಾರ 5 ನೇ ಪ್ರದೋಷ ಕಾಲವಿದೆ. ಪ್ರದೋಷ ಕಾಲವೆಂದರೆ ಶಿವನಿಗೆ ಅತ್ಯಂತ ಪ್ರಿಯ.

ಭಾನುವಾರ ಎಂದರೆ ಸೂರ್ಯ ಅಧಿಪತಿ. ಸೂರ್ಯ ಕುಜನ ಮಿತ್ರ. 9 ಎಂದರೆ ಕುಜನ ಸಂಖ್ಯೆ. ದೀಪ ಕುಜನ ತತ್ವ, ಕುಜ ರಾಹುವಿನ ಶತ್ರು. ರಾಹು ವೈರಸ್ ಗೆ ಅಧಿಪತಿ. ರಾಹುವನ್ನು ಓಡಿಸಲು ಕುಜನ ಅಸ್ತ್ರ. ಇದೇ ಕಾರಣಕ್ಕೆ ಭಾನುವಾರದಂದು 9 ಗಂಟೆ 9 ನಿಮಿಷ ದೀಪ ಬೆಳಗಿದರೆ ಉತ್ತಮ ಎನ್ನುತ್ತದೆ ಜ್ಯೋತಿಷ್ಯಾಸ್ತ್ರ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ