Publish Date: Wed, 20 Feb 2019 (08:51 IST)
Updated Date: Wed, 20 Feb 2019 (08:52 IST)
ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ಒಂದೊಂದು ರೀತಿಯಿರುತ್ತದೆ. ದಿನಕ್ಕೊಂದು ರಾಶಿಯವರ ಗುಣ ಮತ್ತು ಅವಗುಣಗಳನ್ನು ತಿಳಿಯುತ್ತಾ ಸಾಗೋಣ.
ಧನು ರಾಶಿ
ಈ ರಾಶಿಯವರು ಸ್ವತಂತ್ರ ಸ್ವಭಾವದವರು. ಇವರು ಒಂದು ವಿಚಾರದ ಬಗ್ಗೆ ತಮ್ಮದೇ ನಿರ್ಧಾರ, ತಿಳುವಳಿಕೆ ಹೊಂದಿರುತ್ತಾರೆ. ಇವರು ಸ್ನೇಹ ಸ್ವಭಾವದವರು. ಇನ್ನೊಬ್ಬರ ಜತೆಗೆ ಮುಕ್ತ ಮನಸ್ಸಿನಿಂದ ಮಾತನಾಡುತ್ತಾರೆ.
ಆದರೆ ಅವಗುಣಗಳೆಂದರೆ, ವಾಚಾಳಿಗಳು. ಇನ್ನೊಬ್ಬರನ್ನು ಅಭಿಪ್ರಾಯ ಹೇಳಲು ಅವಕಾಶ ಕೊಡುವುದಿಲ್ಲ. ತಮ್ಮದೇ ನಡೆಯಬೇಕೆಂಬ ಹಠ ಜಾಸ್ತಿ. ಇದು ಬೇರೆಯವರಿಗೆ ಕಿರಿ ಕಿರಿ ಉಂಟುಮಾಡುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ