Publish Date: Thu, 14 Feb 2019 (08:44 IST)
Updated Date: Thu, 14 Feb 2019 (08:45 IST)
ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ಒಂದೊಂದು ರೀತಿಯಿರುತ್ತದೆ. ದಿನಕ್ಕೊಂದು ರಾಶಿಯವರ ಗುಣ ಮತ್ತು ಅವಗುಣಗಳನ್ನು ತಿಳಿಯುತ್ತಾ ಸಾಗೋಣ.
ಕರ್ಕಟಕ ರಾಶಿ
ಈ ರಾಶಿಯವರ ಸಕಾರಾತ್ಮಕ ಅಂಶವೆಂದರೆ ಇವರು ಕರುಣೆ ಉಳ್ಳವರು, ಭಾವುಕ ಜೀವಿಗಳು. ಇವರು ಭಾವನಾತ್ಮಕವಾಗಿ ಸಬಲರು ಮತ್ತು ರೊಮ್ಯಾಂಟಿಕ್ ಆಗಿರುತ್ತಾರೆ. ಇವರ ಗುಣ ಇತರರನ್ನು ಬೇಗನೇ ಸೆಳೆಯುತ್ತದೆ. ಪ್ರಕೃತಿ ಸೌಂದರ್ಯ ಪ್ರೇಮಿಗಳು ಮತ್ತು ಪ್ರಯಾಣವನ್ನು ಇಷ್ಟಪಡುತ್ತಾರೆ.
ಅವಗುಣಗಳೆಂದರೆ, ಇವರು ಒಂದೇ ವಿಷಯದ ಬಗ್ಗೆ ತಿಳಿದುಕೊಳ್ಳಲು ಸಮಯ ಹಾಳುಮಾಡುತ್ತಾರೆ. ಕೆಲವು ವಿಷಯವನ್ನು ಗಮನಿಸುವುದೇ ಇಲ್ಲ. ಅವರ ಕೋಪ-ತಾಪ ಆಗಾಗ ಹೆಚ್ಚು ಕಮ್ಮಿಯಾಗುತ್ತಲೇ ಇರುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ