ನಿಮ್ಮ ರಾಶಿಗೆ ಅನುಗುಣವಾಗಿ ನಿಮ್ಮ ಉತ್ತಮ ಮತ್ತು ಕೆಟ್ಟ ಸ್ವಭಾವಗಳು ಹೀಗಿರುತ್ತವೆ!

ಶನಿವಾರ, 9 ಫೆಬ್ರವರಿ 2019 (08:49 IST)
ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ಒಂದೊಂದು ರೀತಿಯಿರುತ್ತದೆ. ದಿನಕ್ಕೊಂದು ರಾಶಿಯವರ ಗುಣ ಮತ್ತು ಅವಗುಣಗಳನ್ನು ತಿಳಿಯುತ್ತಾ ಸಾಗೋಣ.


ಮೇಷ ರಾಶಿ
ಈ ರಾಶಿಯವರ ಸಕಾರಾತ್ಮಕ ಅಂಶವೆಂದರೆ ಇವರು ಮಹತ್ವಾಕಾಂಕ್ಷಿಗಳು, ಸಾಧನೆ ಮಾಡುವ ಛಲವುಳ್ಳವರು ಹಾಗೂ ಸ್ವಾಭಿಮಾನಿಗಳು. ತಮ್ಮ ವೃತ್ತಿ, ಭವಿಷ್ಯವನ್ನು ತಾವೇ ಪರಿಶ್ರಮಪಟ್ಟು ರೂಪಿಸಿಕೊಳ್ಳುತ್ತಾರೆ.

ಅವಗುಣಗಳೆಂದರೆ, ಒಂದು ಸಣ್ಣ ವಿಚಾರವನ್ನು ದೊಡ್ಡದು ಮಾಡುವ ಹುಂಬರು. ಬೇಗನೇ ತಾಳ್ಮೆ ಕಳೆದುಕೊಳ್ಳುತ್ತಾರೆ. ತಮ್ಮ ಸ್ವಾರ್ಥಕ್ಕಾಗಿ ಸುಳ್ಳು ಹೇಳಲೂ ಹಿಂದೆ ಮುಂದೆ ನೋಡುವುದಿಲ್ಲ. ತಮ್ಮ ವೈಯಕ್ತಿಕ ಖುಷಿಗೆ ಪ್ರಾಮುಖ್ಯತೆ ಕೊಡುತ್ತಾರೆ. ಸ್ವಲ್ಪ ಗರ್ವಿಷ್ಠರೂ ಕೂಡಾ ಆಗಿರುತ್ತಾರೆ. ಇನ್ನೊಬ್ಬರ ಮೇಲೆ ಆಧಿಪತ್ಯ ಸಾಧಿಸಲು ಹವಣಿಸುವುದು ಇವರ ಕೆಟ್ಟ ಚಾಳಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮೀನ ರಾಶಿಯವರು ಯಾವ ರಾಶಿಯವರನ್ನು ಮದುವೆಯಾಗುವುದು ಸೂಕ್ತ?