Select Your Language

Notifications

webdunia
webdunia
webdunia
webdunia

ಇಂದು ರಾತ್ರಿ ಚಂದ್ರಗ್ರಹಣ: ಯಾವ ರಾಶಿಯವರಿಗೆ ತೊಂದರೆ?

ಇಂದು ರಾತ್ರಿ ಚಂದ್ರಗ್ರಹಣ: ಯಾವ ರಾಶಿಯವರಿಗೆ ತೊಂದರೆ?
ಬೆಂಗಳೂರು , ಶನಿವಾರ, 28 ಅಕ್ಟೋಬರ್ 2023 (09:10 IST)
ಬೆಂಗಳೂರು: ಇಂದು ತಡರಾತ್ರಿ ಪೂರ್ಣ ಚಂದ್ರನಿಗೆ ರಾಹುಗ್ರಸ್ತ ಗ್ರಹಣವಾಗಲಿದೆ. ಭಾರತ ಸೇರಿದಂತೆ ಏಷ್ಯಾ, ಆಫ್ರಿಕಾ, ಯುರೋಪ್, ಪಶ್ಚಿಮ ಆಸ್ಟ್ರೇಲಿಯಾದಲ್ಲಿ ಈ ಚಂದ್ರಗ್ರಹಣದ ದರ್ಶನವಾಗಲಿದೆ.

ಇದು ಈ ವರ್ಷದ ಕೊನೆಯ ಗ್ರಹಣವಾಗಲಿದೆ. ತಡರಾತ್ರಿ 11.36 ಕ್ಕೆ ಆರಂಭವಾಗುವ ಗ್ರಹಣ, 3.35 ಕ್ಕೆ ಪೂರ್ಣಪ್ರಮಾಣದಲ್ಲಿ ಗೋಚರವಾಗಲಿದೆ. ಭಾರತದಲ್ಲಿ ಈ ಗ್ರಹಣವನ್ನು ಸ್ಪಷ್ಟವಾಗಿ ನೋಡಬಹುದಾಗಿದೆ.

30 ವರ್ಷದ ಬಳಿಕ ಶರದ್ ಹುಣ್ಣಿಮೆಯಂದು ಚಂದ್ರಗ್ರಹಣ ಸಂಭವಿಸುತ್ತಿದೆ. ಅಶ್ವಿನಿ ನಕ್ಷತ್ರ ಮೇಷ ರಾಶಿಯಲ್ಲಿ ಗ್ರಹಣ ಸಂಭವಿಸಲಿದ್ದು, ಈ ರಾಶಿಯವರಿಗೆ ಅರಿಷ್ಟವಿದೆ. ಈ ಚಂದ್ರಗ್ರಹಣವು ಪಾರ್ಶ್ವ ಅಥವಾ ಪಾಕ್ಷಿಕ ಚಂದ್ರಗ್ರಹಣವಾಗಿದೆ.

ಚಂದ್ರಗ್ರಹಣ ನಿಮಿತ್ತ ಇಂದು ತಿರುಪತಿ ಸೇರಿದಂತೆ ಪ್ರಮುಖ ದೇವಾಲಯಗಳಲ್ಲಿ ರಾತ್ರಿ ದೇವರ ದರ್ಶನ ನಿಷೇಧಿಸಲಾಗಿದೆ. ತಿರುಪತಿಯಲ್ಲಿ ರಾತ್ರಿ 7 ರಿಂದ ಬೆಳಗ್ಗಿನ ತನಕ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಮೈಸೂರಿನ ಚಾಮುಂಡಿ ಬೆಟ್ಟದಲ್ಲೂ ರಾತ್ರಿ 6 ರ ಬಳಿಕ ದೇವರ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?