ತುಲಾ ರಾಶಿಯವರ ಅದೃಷ್ಟ ಸಂಖ್ಯೆ ಮತ್ತು ಬಣ್ಣ

Krishnaveni K
ಸೋಮವಾರ, 19 ಫೆಬ್ರವರಿ 2024 (10:10 IST)
ಬೆಂಗಳೂರು: ಪ್ರತಿಯೊಂದು ರಾಶಿಯವರಿಗೂ ಅದೃಷ್ಟದ ಸಂಖ್ಯೆ ಮತ್ತು ಬಣ್ಣ ಎಂದಿರುತ್ತದೆ. ಇಂದು ತುಲಾ ರಾಶಿಯವರ ಅದೃಷ್ಟ ಸಂಖ್ಯೆ ಮತ್ತು ಬಣ್ಣ ಯಾವುದು ನೋಡೋಣ.

ತುಲಾ ರಾಶಿಯವರ ಗುಣ ಸ್ವಭಾವಗಳು
ತುಲಾ ರಾಶಿಯವರು ಎಲ್ಲರೊಂದಿಗೆ ಬೆರೆಯುವ ಸ್ನೇಹ ಜೀವಿಗಳು. ಎಲ್ಲರೊಂದಿಗೂ ಉತ್ತಮ ಸಂಬಂಧ ಕಾಪಾಡಿಕೊಳ್ಳುತ್ತಾರೆ. ಅವರ ಸಂವಹನ ಕಲೆ ಉತ್ತಮವಾಗಿರುತ್ತದೆ. ಮಧ‍್ಯಸ್ಥಿಕೆ, ರಾಯಭಾರತ್ವ ಕೆಲಸಗಳಿಗೆ ಈ ರಾಶಿಯವರು ಹೇಳಿ ಮಾಡಿಸಿದಂತವರು. ಜೀವನದ ಪ್ರತೀ ವಿಚಾರದಲ್ಲೂ ಸಂತೋಷ, ಖುಷಿ ಕಂಡುಕೊ‍ಳ್ಳುವ ಸಹೃದಯಿಗಳಾಗಿರುತ್ತಾರೆ. ಇವರು ತಮ್ಮ ಸಂಗಾತಿಯನ್ನು ಖುಷಿಯಾಗಿಟ್ಟುಕೊಳ್ಳಲು ಪ್ರಯತ್ನ ಮಾಡುತ್ತಾರೆ.

ಆದರೆ ಇಬ್ಬರ ನಡುವೆ ಹೊಂದಾಣಿಕೆ ಮಾಡಿಕೊಳ್ಳುವ ಭರದಲ್ಲಿ ತಪ್ಪು ಹೆಜ್ಜೆ ಹಾಕುವುದು, ಅತಿಯಾಗಿ ಯೋಚನೆ ಮಾಡುವುದು ಇವರ ಋಣಾತ್ಮಕ ಅಂಶಗಳು. ಇನ್ನೊಬ್ಬರ ಮೇಲೆ ಅತಿಯಾಗಿ ಅವಲಂಬಿಸುತ್ತಾರೆ. ಬೇರೆಯವರ ಮಾತಿಗೆ ಇಲ್ಲ ಎಂದು ಖಡಾಖಂಡಿತವಾಗಿ ಹೇಳಲು ವಿಫಲರಾಗುತ್ತಾರೆ.

ಅದೃಷ್ಟ ಸಂಖ್ಯೆ ಮತ್ತು ಬಣ್ಣ
ಈ ರಾಶಿಯವರಿಗೆ ಅದೃಷ್ಟ ತರುವ ಬಣ್ಣಗಳು ನೀಲಿ ಮತ್ತು ಹಸಿರು. ಈ ಬಣ್ಣಕ್ಕೆ ಹೊಂದಿಕೊಂಡು ಯಾವುದೇ ಬಟ್ಟೆ ತೊಟ್ಟರೂ ಇವರಿಗೆ ಅದೃಷ್ಟ ಖುಲಾಯಿಸುತ್ತದೆ. ಅದೇ ರೀತಿ 5,6,9 ಅದೃಷ್ಟಶಾಲೀ ಸಂಖ್ಯೆಗಳು. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಆಯ್ಕೆಗಳು ಮಾಡಬೇಕಾದಾಗ ಈ ಸಂಖ್ಯೆಯನ್ನು ಆರಿಸಿ. ಈ ರಾಶಿಯವರಿಗೆ ಶುಕ್ರವಾರ, ಶನಿವಾರ ಮತ್ತು ಮಂಗಳವಾರ ಅದೃಷ್ಟದಾಯಕವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸೋಮವಾರ ಶಿವ ಹೃದಯಂ ಸ್ತೋತ್ರ ಪಾರಾಯಣ ಮಾಡಿ

ತುಳಸಿ ಹಬ್ಬ 2025: ತುಳಸಿ ಪೂಜೆ ಮಾಡುವಾಗ ಈ ಮಂತ್ರ ಜಪಿಸಿದರೆ ಅದೃಷ್ಟ

ಎಲ್ಲಾ ರೀತಿಯ ಗ್ರಹ ದೋಷಗಳಿಗೆ ಈ ಮಂತ್ರ ಪರಿಹಾರ

ತುಳಸಿ ಹಬ್ಬ ಯಾವಾಗ, ಪೂಜಾ ಸಮಯ, ಶುಭ ಮುಹೂರ್ತ ಇಲ್ಲಿದೆ

ಧನಾದಾಯ ವೃದ್ಧಿಗೆ ಇಂದು ಲಕ್ಷ್ಮೀ ದೇವಿಯ ಈ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments